Latest

ದಿಢೀರ್ ಭೂ ಕುಸಿತ; ಅಡಿಕೆ ತೋಟ ನಾಶ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಕೆಳಗಿನ ಕೇರಿ ಗ್ರಾಮದಲ್ಲಿ ದಿಡೀರ್ ಭೂ ಕುಸಿತ ಉಂಟಾಗಿ ಅಪಾರಪ್ರಮಾಣದ ಅಡಿಕೆ ತೋಟ ನಾಶವಾಗಿದೆ.

ಭೂ ಕುಸಿತದಿಂದ ಮಧುಸೂದನ್ ಹೆಗಡೆ ಎಂಬುವವರಿಗೆ ಸೇರಿದ 1 ಎಕರೆ ಅಡಿಕೆ ತೋಟ ನಾಶವಾಗಿದ್ದು, ಅಂದಾಜು 20 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Home add -Advt

Related Articles

Back to top button