Kannada NewsLatestNational

*ಮಕ್ಕಳನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗುವಾಗ ಭೀಕರ ಅಪಘಾತ: ಮೂವರು ದುಷ್ಕರ್ಮಿಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಇಬ್ಬರು ಮಕ್ಕಳು ಹಾಗೂ ಓರ್ವ ವ್ಯಕ್ತಿಯನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗುವಾಗ ಭೀಕರ ಕಾರು ಅಪಘಾತ ಸಂಭವಿಸಿದ್ದು, ಮೂವರು ಅಪಹರಣಕಾರರು ಸಾವನ್ನಪ್ಪಿರುವ ಗಹ್ಟನೆ ನಡೆದಿದೆ.

ಉತ್ತರ ಪ್ರದೇಶದ ಬರೇಕಿಯಲ್ಲಿ ಈ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ಮೂವರು ಅಪಹರಣಕಾರರು ಸಾವನ್ನಪ್ಪಿದ್ದಾರೆ. ಕಿಡ್ನ್ಯಾಪ್ ಆಗಿದ್ದ ವ್ಯಕ್ತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹರಿಯಾಣದ ಗುರುಗ್ರಾಮ ಮೂಲದ ಮೂವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಬರೇಲಿ ಮೂಲಕವಾಗಿ ಕರ್ದೊಯ್ಯುತ್ತಿದ್ದರು. ಲಖನೌ-ದೆಹಲಿ ಹೆದ್ದಾರಿಯ ಬರೇಲಿ-ರಾಂಪುರದಲ್ಲಿ ಕಾರು ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದು, ದುಷ್ಕರ್ಮಿಗಳು ಸಾವನ್ನಪ್ಪಿದ್ದಾರೆ.

Home add -Advt

Related Articles

Back to top button