
ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದ ವಿವಿಧೆಡೆ ಮತ್ತೆ ಮೇಘಸ್ಫೋಟ, ಭೂಕುಸಿತ ಸಂಭವಿಸಿದ್ದು, ಈವರೆಗೆ 6 ಜನರು ಮೃತಪಟ್ಟಿದ್ದಾರೆ. 11 ಜನರು ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದ ಚಮೋಲಿ, ರುದ್ರಪ್ರಯಾಗ, ತೆಹ್ರಿ, ಬಾಗೇಶ್ವರ ಜಿಲ್ಲೆಗಳಲ್ಲಿ ಮೇಘಸ್ಫೋಟ, ಭೀಕರ ಭೂಕುಸಿತ ಸಂಭವಿಸಿದೆ. 40-50 ಮನೆಗಳು ಭೂಕುಸಿತದಿಂದಾಗಿ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಈವರೆಗೆ ಆರು ಜನರ ಮೃತದೇಹಗಳು ಪತ್ತೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ. ಎನ್ ಡಿ ಆರ್ ಫ್, ಎಸ್ ಡಿ ಆರ್ ಎಫ್ ತಂಡಗಳಿಂದ ರಕ್ಷಣ ಅಕಾರ್ಯಾಚರಣೆ ಮುಂದುವರೆದಿದೆ. ಉತ್ತರಾಖಂಡದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಜನರು ತತ್ತರಿಸಿಹೋಗಿದ್ದಾರೆ.
ಹಲವೆಡೆ ರಸ್ತೆ ಸಂಪರ್ಕವೇ ಕಡಿತಗೊಂಡಿದ್ದು, ಹೆದ್ದಾರಿಗಳೇ ಕುಸಿದು ಹೋಗಿವೆ. ರಕ್ಷಣೆಗಾಗಿ ಜನರು ಒರೆಯಿಡುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರಿ ಮಲೆ ಮುಂದುವರೆದಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.