Latest

ಹೆಚ್ ಡಿಕೆ ಮನೆಗೆ ಬಂದಿದ್ದಕ್ಕೆ ಪಕ್ಷದಿಂದ ಉಚ್ಛಾಟನೆ ಯಾವ ನ್ಯಾಯ?; ಬಿಜೆಪಿ ಮುಖಂಡ ಹೊಕ್ರಾಣಿ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ ಮನೆಗೆ ಭೇಟಿ ನಿಡಿದ ಬೆನ್ನಲ್ಲೇ ಸಂತೋಷ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದ್ದು, ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸಂತೋಷ್ ಹೊಕ್ರಾಣಿ, 18 ವರ್ಷ ಪಕ್ಷಕ್ಕಾಗಿ ದುಡಿದಿದ್ದಕ್ಕೆ ಈ ಶಿಕ್ಷೆಯೇ ಎಂದು ಪ್ರಶ್ನಿಸಿದ್ದಾರೆ.

ತಮ್ಮನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಮಾತನಾಡಿದ ಸಂತೋಷ್ ಹೊಕ್ರಾಣಿ, 18 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ್ದಕ್ಕೆ ದೊಡ್ಡ ಬಹುಮಾನ ಕೊಟ್ಟಿದ್ದೀರಿ. ಇದಕ್ಕಾಗಿ ಚಿರಋಣಿ. ಯಾವ ಕಾರಣಕ್ಕೆ ನನ್ನನ್ನು ಉಚ್ಛಾಟಿಸಿದ್ದೀರಿ ಎಂದು ಸ್ಪಷ್ಟ ಪಡಿಸಿ ಎಂದು ಹೇಳಿದ್ದಾರೆ.

ನಿಮಗಾಗಿ ಕೆಲಸಮಾಡಿದವರಿಗೆ ಕೊಡುವ ಬಹುಮಾನ ಇದೇನಾ? ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಕ್ಕೆ ಹೀಗಾ? ಯಾಕೆ ನಿಮಗೆ ಭಯ ಕಾಡುತ್ತಿದೆಯೇ? ಹೆಚ್ ಡಿಕೆ ನಮ್ಮ ಮನೆಗೆ ಬಂದಿದ್ದು ಪಕ್ಷ ವಿರೋಧಿ ಚಟುವಟಿಕೆಯೇ? ನಿಮ್ಮ ಮನೆಗೆ ಬೇರೆ ಪಕ್ಷದವರು ಬರುವುದಿಲ್ಲವೇ ಅಥವಾ ನೀವು ಹೋಗುವುದಿಲ್ಲವೇ ಎಂದು ಶಾಸಕ ವೀರಣ್ಣ ಚಿರಂತಿಮಠ ಅವರಿಗೆ ಪ್ರಶ್ನಿಸಿದ್ದಾರೆ.

ಇಂತಹ ರಾಜಕಾರಣ ಬೇಸರ ತಂದಿದೆ. ಇದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು ಪರಿಹಾರ ನೀಡಬೇಕು ಎಂದು ಹೊಕ್ರಾಣಿ ತಿಳಿಸಿದ್ದಾರೆ.

Home add -Advt

Related Articles

Back to top button