
ಪ್ರಗತಿವಾಹಿನಿ ಸುದ್ದಿ: ಇಬ್ಬರು ಮಕ್ಕಳ ತಂದೆ ಪತ್ನಿಯ ಸಹೋದರಿಯೊಂದಿಗೆ ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಕೇಶವ್ ಕುಮಾರ್ ತನ್ನ ಹೆಂಡತಿಯ 19 ವರ್ಷದ ತಂಗಿಯ ಜೊತೆ ಪರಾರಿಯಾಗಿದ್ದಾನೆ. ಇದೇ ವೇಳೆ ಕೇಶವ್ ಪತ್ನಿಯ ಸಹೋದರ ಕೂಡ ಕೇಶವ್ ಸಹೋದರಿ ಜೊತೆ ಮನೆಬಿಟ್ಟು ಹೋಗಿದ್ದಾರೆ.
ಪೊಲೀಸರು ಎರಡೂ ಜೋಡಿಯನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಎರಡೂ ಜೋಡಿಗೂ ಒಟ್ಟಿಗೆ ಇರಲು ಅವಕಾಶ ನೀಡಲಾಗಿದ್ದು, ಕುಟುಂಬಗಳು ರಾಜಿಯಾಗಿವೆ.