
ಪ್ರಗತಿವಾಹಿನಿ ಸುದ್ದಿ; ಲಕ್ನೋ: ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸಪ್ತಪದಿಯ ತುಳಿಯುತ್ತಿದ್ದ ವೇಳೆ ವಧು ಈ ಮದುವೆ ಇಷ್ಟ ಇಲ್ಲ ಎಂದು ಹೇಳಿ ಮದುವೆಯನ್ನೇ ಅರ್ಧಕ್ಕೆ ನಿಲ್ಲಿಸಿದ ಘಟನೆ ಉತ್ತರ ಪ್ರದೇಶದ ಕುಲಾಪಾಡ್ ತಾಲೂಕಿನ ಚಾಮಹೋ ಗ್ರಾಮದಲ್ಲಿ ನಡೆದಿದೆ.
ಎರಡು ಕುಟುಂಬದ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮಗಳು ನಡೆದಿದ್ದು, ಸಪ್ತಪದಿ ತುಳಿಯುತ್ತಿದ್ದ ವೇಳೆ ಇನ್ನೇನು ಆರನೆ ಹೆಜ್ಜೆ ಇಡಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ವಧು ಮದುವೆ ಇಷ್ಟವಿಲ್ಲ ಎಂದಿದ್ದಾಳೆ.
ಕುಟುಂಬದವರು ಮನವೊಲಿಕೆಗೆ ಯತ್ನಿಸಿದ್ದಾರೆ ಆದರೂ ವಧು ಒಪ್ಪಿಲ್ಲ. ಅಂತಿಮವಾಗಿ ಮದುವೆ ಮುರಿದುಬಿದ್ದಿದ್ದು, ವಿವಾಹ ಸಮಾರಂಭಕ್ಕೆ ಬಂದವರು ಬೇಸರದಿಂದ ವಾಪಸ್ ಆಗಿದ್ದಾರೆ.
ಬಿಮ್ಸ್ ಅಭಿವೃದ್ಧಿಗೆ ಮುಂದೆ ಬಂದ ಉದ್ಯಮಿಗಳು; 22.26 ಲಕ್ಷ ರೂಪಾಯಿ ಕೊಡುಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ