*ಜನರನ್ನು ಸೇರಿಸಲು ಸ್ಟಾರ್ ಗಳ ಜೊತೆ ಬಂದ ಸಿದ್ದರಾಮಯ್ಯ; ಒಂದೇ ಒಂದು ಆಸ್ಪತ್ರೆ, ಕಾಲೇಜು, ರಸ್ತೆಯೂ ಇಲ್ಲ; ಋಣ ತೀರಿಸಲು ಬದ್ಧತೆ ಬೇಕು ಎಂದು ಕಿಡಿಕಾರಿದ ವಿ.ಸೋಮಣ್ಣ*
ಪ್ರಗತಿವಾಹಿನಿ ಸುದ್ದಿ; ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಸ್ಟಾರ್ ನಟ ನಟಿಯರು ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸಿಡಿಮಿಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸೋಮಣ್ಣ, ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್ ಗಳ ಜೊತೆ ಬಂದು ಜನರನ್ನು ಸೇರಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ತಂದೆ-ಮಗ ವರುಣಾ ಕ್ಷೇತ್ರದಲ್ಲಿ ಒಂದಿಂಚು ಅಭಿವೃದ್ಧಿ ಮಾಡಿಲ್ಲ, ಕಳೆದ ಬಾರಿ ಬಾದಾಮಿಯಲ್ಲಿ ಗೆದ್ದಿದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ, ವರುಣಾದಲ್ಲಿ ಒಂದು ಕಾಲೇಜು, ಒಂದು ಆಸ್ಪತ್ರೆ ಕೂಡ ಇಲ್ಲ. ಅಷ್ಟೇ ಅಲ್ಲ ಓಡಾಡಲು ಸರಿಯಾದ ರಸ್ತೆ ಕೂಡ ಇಲ್ಲ. ಜನರ ಋಣ ತೀರಿಸಲೂ ಬದ್ಧತೆ ಇರಬೇಕು ಎಂದು ಕಿಡಿಕಾರಿದ್ದಾರೆ.
ಎಲ್ಲದಕ್ಕೂ ನಾನೇ ಎಂಬುದನ್ನು ಸಿದ್ದರಾಮಯ್ಯ ಮೊದಲು ಬಿಡಬೇಕು. ವರುಣ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿದರೆ ನಾನು ವರುಣಾದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡುತ್ತೇನೆ. ಸಿದ್ದರಾಮಯ್ಯ ಸ್ಟಾರ್ ಪ್ರಚಾರಕರ ಜೊತೆ ಬಂದು ಪ್ರಚಾರ ಮಾಡಿದರೂ ಯಾವ ಪ್ರಯೋಜನವಾಗಲ್ಲ. ಒಂದು ದಿನ ಪ್ರಚಾರಕ್ಕೆ ಬರ್ತಿನಿ ಎಂದಿದ್ದ ಸಿದದ್ರಾಮಯ್ಯ ಈಗ ಪದೇ ಬರುತ್ತಿದ್ದಾರೆ. ಬಿಜೆಪಿ ಕಂಡು ಹತಾಶಾರಗಾದಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ