Latest

*ಈಗ ಬರಿ ಹೆಲಿಕಾಪ್ಟರ್ ಗಾಜು ಒಡೆದಿದೆ; ಹನುಮ ದೇವರಿಗೆ ಸಮಸ್ಯೆ ಮಾಡಿದ್ರೆ ಹೀಗೆ ಆಗೋದು; ಡಿ.ಕೆ.ಶಿವಕುಮಾರ್ ವಿರುದ್ಧ ಯತ್ನಾಳ್ ಪರೋಕ್ಷ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರವ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು ಇದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿರುವ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದೆ.

Home add -Advt

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೇ ವಿಚಾರವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಹನುಮ ದೇವರಿಗೆ ಸಮಸ್ಯೆ ಮಾಡಿದರೆ ಹೀಗೆ ಆಗೋದು, ಈಗ ಬರಿ ಹೆಲಿಕಾಪ್ಟರ್ ಗ್ಲಾಸ್ ಅಷ್ಟೇ ಒಡೆದಿದೆ… ಇನ್ನೊಮ್ಮೆ ಏನಾದ್ರೂ ಕಿರಿಕ್ ಮಾಡಿದ್ರೆ…. ಪವನಪುತ್ರ ಹನುಮಾನ್ ಕಿ ಜೈ…ಎಂದು ವ್ಯಂಗ್ಯಭರಿತವಾಗಿ ಅಣಕಮಾಡಿ ತೋರಿಸಿದ್ದಾರೆ.

ಬಜರಂಗದಳ ಬ್ಯಾನ್ ಮಾದಲು ಬಜರಂಗದಳದವೇರೂ ಭಯೋತ್ಪಾದಕರಲ್ಲ, ಬಜರಂಗದಳ ಅಂದ್ರೆ ಅದು ಗಂಗಾವತಿ. ಡಿ.ಕೆ.ಶಿವಕುಮಾರ್ ರಿಂದ ಬಜರಂಗದಳವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

https://pragati.taskdun.com/d-k-shivakumarhelicoper-landinghalipadfireuttara-kannadahonnavara/


Related Articles

Back to top button