ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಉನ್ನತ ಮೂಲಗಳು ಈ ಕುರಿತು ಮಾಹಿತಿ ನೀಡಿದ್ದು, ಈಗಾಗಲೆ ಬಂಗಳೂರಿನಲ್ಲಿ 6 ರಿಂದ 8ನೇ ತರಗತಿಗಳನ್ನೂ ಬಂದ್ ಮಾಡಲಾಗಿದೆ. 10ನೇ ತರಗತಿ ಕೂಡ ಕಡ್ಡಾಯವಿಲ್ಲ.
ಬಿರು ಬೇಸಿಗೆ ಮತ್ತು ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಗೊತ್ತಾಗಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಹೇಳಿಕೆ ನೀಡಿದ್ದಾರೆ. ಶಾಲೆಗಳನ್ನು ಬಂದ್ ಮಾಡುವಂತೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಜೊತೆ ಮಾತನಾಡಿದ್ದೇನೆ. ಒಂದೆರಡು ದಿನಗಳಲ್ಲಿ ಆದೇಶವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಶಾಲೆಗಳಲ್ಲಿ ಕೊರೋನಾ ಕಾಣಿಸಿದ ನಂತರ ಬಂದ್ ಮಾಡಿರುವ ಸರಕಾರ ಬೇರೆ ಜಿಲ್ಲೆಗಳಲ್ಲಿ ಅಂತಹ ರಿಸ್ಕ್ ತೆಗೆದುಕೊಳ್ಳುವುದು ಬೇಡ, ಪ್ರತಿ ವರ್ಷವೂ ಬೇಸಿಗೆ ರಜೆ ನೀಡುವ ಸಂಪ್ರದಾಯವಿರುವುದರಿಂದ ಈಗ ಶಾಲೆಗಳನ್ನು ಬಂದ್ ಮಾಡಿದರೆ ಸಮಸ್ಯೆ ಏನಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ ಎಂದು ಗೊತ್ತಾಗಿದೆ.
ವಿವಿಧ ಶಿಕ್ಷಕರ ಸಂಘಟನೆಗಳು ಕೂಡ ಶಾಲೆಗಳಿಗೆ ರಜೆ ನೀಡುವಂತೆ ಒತ್ತಾಯಿಸಿವೆ.
ಸೋಮವಾರದೊಳಗೆ ಸರಕಾರದ ಸ್ಪಷ್ಟ ಆದೇಶ ಹೊರಬೀಳಬಹುದು.
ಕೋವಿಡ್ ಲಸಿಕೆ ಪಡೆದ 14 ವೈದ್ಯರಲ್ಲಿ ಸೋಂಕು ಪತ್ತೆ
ಬಿಎಸ್ ವೈ ಕೆಜೆಪಿ ಇತಿಹಾಸ ಕೆದಕಿದ ಸಚಿವ ಈಶ್ವರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ