*ಅವರ ಹೆಸರನ್ನು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ; ಅವರನ್ನೇ ಕೇಸ್ ಸುತ್ತಿಕೊಳ್ಳಲಿದೆ: ಎಚ್ಚರಿಕೆ ನೀಡಿದ ಬಿ.ನಾಗೇಂದ್ರ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ವಾಲ್ಮೀಕಿ ಜಯಂತಿ ದಿನದಂತೆ ಬಳ್ಳಾರಿಗೆ ಆಗಮಿಸಿದ್ದಾರೆ. ಇದೇ ವೇಳೆ ಸಣ್ಣ ತಪ್ಪು ಮಾಡದ ನನ್ನನ್ನು ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದರಲ್ಲ, ಅವರನ್ನು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಬಿ.ನಾಗೇಂದ್ರ ನಾನು ಯಾವುದೇ ತಪ್ಪು ಮಾಡಿಲ್ಲ, ಸಣ್ಣ ದೋಷವೂ ಇಲ್ಲದೇ ಹೊರಬರುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾನು ಅಕ್ರಮ ಮಾಡಿದ್ದೇನೆ ಎಂದು ಕೆಲವರು ನಂಬಿದ್ದಾರೆ. ಇದು ಸುಳ್ಳು. ನಾನು ಯಾರನ್ನೂ ನಂಬಿಸುವ ಅಗತ್ಯವಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಯಾವ ದೋಷವೂ ಇಲ್ಲದೇ ಈ ಪ್ರಕರಣದಿಂದ ಹೊರಬರುತ್ತೇನೆ ಎಂದು ಭಾವುಕರಾದರು.
ವಾಲ್ಮೀಕಿ ನಿಗಮದ ಹಗರಣ ಎಂದು ಬಿಜೆಪಿಯ ಯಾರು ಯಾರು ಇದನ್ನೆಲ್ಲ ಮಾಡುತ್ತಿದ್ದಾರಲ್ಲ ಅವರೆಲ್ಲರನ್ನು ಹಗರಣ ಸುತ್ತಿಕೊಳ್ಳಲಿದೆ. ಆ ಎಲ್ಲಾ ಬಿಜೆಪಿ ನಾಯಕರ ಹೆಸರನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲಾಗಲಿದ್ದಾರೆ ನೋಡ್ತಾ ಇರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ