Kannada NewsKarnataka NewsNational

*ವಾಲ್ಮೀಕಿ ನಿಗಮದ ಪ್ರಕರಣ: ಮತ್ತೋರ್ವ ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಮತ್ತೊಬ್ಬ ಕಿಂಗ್ ಪಿನ್‌ ಆಂಧ್ರ ಮೂಲದ ಶ್ರೀನಿವಾಸ್ ರಾವ್ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣದ ಕಿಂಗ್ ಪಿನ್ ಸತ್ಯನಾರಾಯಣ ರಾವ್ ಅತ್ಯಾಪ್ತನಾಗಿದ್ದ. ವಾಲ್ಮೀಕಿ ನಿಗಮ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿರೋ ಆರೋಪಿ ಶ್ರೀನಿವಾಸ್ ರಾವ್ ಬಿಎಸ್‌ಎನ್‌ಎಲ್ ಮಹಿಳಾ ಅಧಿಕಾರಿಯೊಬ್ಬರ ಪತಿಯಾಗಿದ್ದು, ಆರೋಪಿ ಶ್ರೀನಿವಾಸ್ ರಾವ್ ಕಂಪ್ಯೂಟರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ.

ಸತ್ಯ ನಾರಾಯಣ ವರ್ಮಾ ಜೊತೆ ಸತತ ಕಾಂಟ್ಯಾಕ್ಟ್ ನಲ್ಲಿದ್ದ ಆರೋಪಿ ಶ್ರೀನಿವಾಸ್‌, ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಸಹಕಾರ ಮಾಡಿದ್ದು ಹಣ ವರ್ಗಾವಣೆಗೆ ಈತನೆ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಇದೇ ರೀತಿ ಈ ಹಿಂದೆಯೂ ಛತ್ತೀಸ್ತಢದಲ್ಲಿ ಸತ್ಯನಾರಾಯಣ ವರ್ಮಾ ಹಾಗೂ ಶ್ರೀನಿವಾಸ ರಾವ್ ಸೇರಿ ಕೃತ್ಯ ನಡೆಸಿದ್ರು.

ಅದೇ ರೀತಿ ನಿಗಮದ ಅಕೌಂಟ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಸ್ಕೆಪ್ ಆಗಿದ್ದ ಶ್ರೀನಿವಾಸ ರಾವ್‌ನನ್ನು ಎಸ್‌ಐಟಿ ನಿನ್ನೆ ಬಂಧನ ಮಾಡಿ 9 ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button