Kannada NewsLatest

ರಮೇಶ ಜಾರಕಿಹೊಳಿ ಉಪಮುಖ್ಯಮಂತ್ರಿ ಮಾಡಬೇಕಂತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡಿ ಎಂದು ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

Home add -Advt

ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ಯಡಿಯೂರಪ್ಪ ಸರಕಾರದಲ್ಲಿ ವಾಲ್ಮೀಕಿ ಜನಾಂಗದ ನಾಲ್ವರಿಗೆ ಸಚಿವಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಹಾಗಾಗಿ ಈಗ ರಮೇಶ ಜಾರಕಿಹೊಳಿಯ್ನೂ ಸೇರಿಸಿಕೊಂಡರೆ ತಪ್ಪಲ್ಲ. ಅವರನ್ನು ಉಪಮುಖ್ಯಮಂತ್ರಿ ಮಾಡುವ ಮೂಲಕ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದರು.

ರಮೇಶ ಜಾರಕಿಹೊಳಿ ಭೇಟಿಯಾದ ನಂತರ ಅವರು ಈ ಮಾತು ಹೇಳುತ್ತಿರುವುದನ್ನು ಗಮನಿಸಿದರೆ, ಸ್ವಾಮೀಜಿ ಮೂಲಕ ರಮೇಶ ಇಂತಹ ಬೇಡಿಕೆ ಮಂಡಿಸಿದ್ದಾರಾ ಎನ್ನುವ ಅನುಮಾನ ಬರುವಂತಾಗಿದೆ. 

ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ

Related Articles

Back to top button