Kannada NewsKarnataka NewsLatest

ಸಾಹಿತಿ ವಾಮನ ಕುಲಕರ್ಣಿ ವಿಧಿವಶ

ಪ್ರಗತಿವಾಹಿನಿ ಸುದ್ದಿ, ಅಥಣಿ – ಮೂಲತಃ ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದವರಾದ ವಾಮನ ಕುಲಕರ್ಣಿಯವರ ಕರೋನಾಕ್ಕೆ ಬಲಯಾಗಿ ನಿನ್ನೆ ರಾತ್ರಿ ೧೨ ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
 ತಾಲೂಕಿನ ರಡ್ಡೆರಟ್ಟಿ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರೊಬ್ಬ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ. ಸಾಹಿತ್ಯ ಕ್ಷೇತ್ರಕ್ಕೆ ” ತೆರೆಗಳು” ಎಂಬ ಶ್ರೇಷ್ಠಮಟ್ಟದ ಕವನ ಸಂಕಲನ ಹಾಗೂ ಸ್ವಾತಂತ್ರ್ಯ ಸಂಗ್ರಾಮ ಕಥೆಯನ್ನು ಹೊಂದಿದ್ದ ” ಜಾಳಪೋಳ” ಕಥಾ ಸಂಕಲನ ಕೃತಿಗಳನ್ನು ನೀಡಿದ್ದರು. ಜಾಳಪೋಳ ಈ ಕಥೆಯನ್ನು ನಾಟಕಕ್ಕೆ ಅಳವಡಿಸಿ  ಕಲಾವಿದರು ರಾಜ್ಯಾದ್ಯಂತ ಪ್ರದರ್ಶನ ಮಾಡಿದ್ದರು. ಇದು ವಾಮನರ ಕೀರ್ತಿ ತಂದ ಕೊಟ್ಟ ಕೃತಿ. ಅನೇಕ ಬಹುಮಾನಗಳು ಕೂಡ ಸಂದಿದ್ದವು.
ಅವರು ಆಕಾಶವಾಣಿ ನಿರೂಪಕರಾಗಿ ಸೇವೆಸಲ್ಲಿಸಿದ್ದರು. ಕೋಹಳ್ಳಿಯಲ್ಲಿ ” ಪುಸ್ತಕ ಮನೆ” ಯನ್ನು ಹುಟ್ಟುಹಾಕಿ ಯುವಜನತೆಯನ್ನು ಪುಸ್ತಕದತ್ತ ಮುಖಮಾಡಿಸಿದ್ದರು. ಪ್ರಖರ ವಾಗ್ಮಿಗಳು ಆಗಿದ್ದರು. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡಿದ್ದರು.
     ಅದಮ್ಯ ಜೀವನೋತ್ಸಾಹ ಹೊಂದಿದ್ದ ಅವರು ಕೇವಲ ೫೪ ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು ಸಾಹಿತ್ಯ ಲೋಕಕ್ಕೆ ಬರಸಿಡಿಲೆರಗಿದಂತಾಗಿದೆ. ಅವರು ಪತ್ನಿ, ಓರ್ವ ಪುತ್ರ,ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಪಾರ ಸ್ನೇಹಿತರು, ಶಿಷ್ಯಬಳಗ ಅವರ ನಿಧನಕ್ಕೆ ಶೋಕವ್ಯಕ್ತಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button