Karnataka News

*ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ಈಜಲು ಹೋಗಿ ನಾಲೆಯ ನೀರಿನಲ್ಲಿ ಬಿಇ ವಿದ್ಯಾರ್ಥಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯ ಯಲಿಯೂರು ಬಳಿಯ ವಿಸಿ ನಾಲೆಯಲ್ಲಿ ನಡೆದಿದೆ.

Home add -Advt

ಯಶ್ವಂತ್ (22)ನೀರು ಪಾಲಾಗಿರುವ ವಿದ್ಯಾರ್ಥಿ. ಮದ್ದೂರು ತಾಲೂಕಿನ ಸೋಮನಹಳ್ಳಿಯ ಅನಿಲ್ ಕುಮಾರ್ ಹಾಗೂ ಉಮಾ ದಂಪತಿಯ ಪುತ್ರ. ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ಯಶ್ವಂತ್, ಇಂದು ಮಧ್ಯಾಹ್ನ ಕಾಲೇಜಿನಿಂದ ಸ್ನೇಹಿತರೊಂದಿಗೆ ವಿಸಿ ನಾಲೆಗೆ ಈಜಲು ತೆರಳಿದ್ದ.

ಈಜು ಬಾರದಿದ್ದರೂ ನಾಲೆಗೆ ಇಳಿದಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಮೂವರು ಯುವಕರು ಕೊಚ್ಚಿ ಹೋಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ. ಆದರೆ ಯಶ್ವಂತ್ ನೀರು ಪಾಲಾಗಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಧಾವಿಸಿ, ನಾಲೆಯಲ್ಲಿ ಯಶ್ವಂತ್ ಗಾಗಿ ಶೋಧ ನಡೆಸಿದ್ದಾರೆ.


Related Articles

Back to top button