ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿದ್ದು, ಐತಿಹಾಸಿಕ ಚಾಮರಾಜನಗರದ ವೀರಭದ್ರೇಶ್ವರ ಸ್ವಾಮಿ ತೇರು ಮುರಿದು ಬಿದ್ದ ಘಟನೆ ನಡೆದಿದೆ.
ಚಾಮರಾಜನಗರದ ಚೆನ್ನಪ್ಪನಪುರದಲ್ಲಿ ಈ ಅವಘಡ ಸಂಭವಿಸಿದೆ. ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ದೇವರ ರಥೋತ್ಸವ ನಡೆಯುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಥ ಎಳೆಯುತ್ತಿದ್ದ ವೇಳೆ ರಥದ ಚಕ್ರ ಮುರಿದಿದೆ. ನೋಡ ನೋಡುತ್ತಿದ್ದಂತೆಯೇ ರಥ ಉರುಳಿ ಬಿದ್ದಿದೆ.
ಸಧ್ಯ ಭಕ್ತರು ಕ್ಷಣಾರ್ಧದಲ್ಲಿ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ರಥೋತ್ಸವದ ವೇಳೆ ಸಂಭವಿಸಿದ ಈ ಅವಘಡದಿಂದಾಗಿ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಪುನೀತ್ ರಾಜ್ ಕುಮಾರ್ ಗೆ ಕನ್ನಡ ರತ್ನ ಪ್ರಶಸ್ತಿ; ಬೆಂಗಳೂರಿಗೆ ಆಗಮಿಸಿದ ನಟ ರಜನಿಕಾಂತ್
https://pragati.taskdun.com/latest/rajanikanthbngalorevisitkannada-ratha-awardpuneeth-raj-kumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ