ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘ ಹುಬ್ಬಳ್ಳಿ-ಧಾರವಾಡ ಇದರ ನೂತನ ಆಡಳಿತ ಮಂಡಳಿಯ ಸಭೆಯು ಇತ್ತೀಚೆಗೆ ಕೆ ಎಚ್ ಪಾಟೀಲ ಕಾಲೇಜ್ ಸಭಾಗೃಹದಲ್ಲಿ ಜರುಗಿತು.
ನೂತನ ಅಧ್ಯಕ್ಷರನ್ನಾಗಿ ಹಿರಿಯ ಸಹಕಾರಿ ಧುರೀಣರೂ ಹಾಗೂ ಮಾಜಿ ಶಾಸಕರೂ ಆದ ಡಿ ಆರ್ ಪಾಟೀಲ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ರಮೇಶ ಜಂಗಲ,ಕಾರ್ಯದರ್ಶಿ ಯಾಗಿ ಆರ್ ಕೆ ಪಾಟೀಲ, ಖಜಾಂಚಿಯಾಗಿ ರವಿ ಮೂಲಿಮನಿ ಅವರನ್ನು ಆರಿಸಲಾಯಿತು.
ಈ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವ್ಹಿ ಬಿ ನಾಗನೂರ ಅವರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಸಭೆಯಲ್ಲಿ ಶಾಸಕರೂ ಮಾಜಿ ಸಚಿವರೂ ಆದ ಎಚ್ ಕೆ ಪಾಟೀಲ ಮಾತನಾಡಿ ಈ ಸಂಘದ ಅಡಿಯಲ್ಲಿರುವ ಎಲ್ಲಾ ಶಾಲೆ ಕಾಲೇಜು ಗಳು ಅತ್ಯುತ್ತಮ ಕಾರ್ಯ ಮಾಡುತ್ತಿದ್ದು ಪ್ರತಿ ವರ್ಷ ಉತ್ತಮ ಫಲಿತಾಂಶಗಳ ನ್ನು ನೀಡುತ್ತಾ ಬಂದಿವೆ. ಸಮಾಜದ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುವತ್ತ ಹೆಚ್ಚು ಗಮನ ಹರಿಸಲು ಎಲ್ಲ ರಿಗೂ ಕಿವಿ ಮಾತು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ಬಿ ಆರ್ ಯಾವ ಗಲ್ಲ,ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ, ನಂದಿ ಶುಗರ್ ಚೇರ್ಮನ್ ರಾದ ಶಶಿಕಾಂತ ಪಾಟೀಲ, ಕೊಪ್ಪಳದ ಹಿರೇಗೌಡ ವಕೀಲರು, ಹಾವೇರಿಯ ವಕೀಲರು, ಜಮಖಂಡಿಯ ತುಳಸೀ ಗಿರಿ ವಕೀಲರು, ವ್ಹಿ ಆರ್ ಹನಮರಡ್ಡಿ, ಆರ್ ಆರ್ ಸಾವಕಾರ, ಧಾರವಾಡದ ನಿವಾಸ ಪಾಟೀಲ, ಆಲೂರ, ಮಹೇಶ ಪಾಟೀಲ, ಕ್ರಿಷಿ ಕಾಲೇಜಿನಲ್ಲಿ ಡೀನ್ ರಾಗಿರುವ (ಪ್ರೋ)ಶೋಭಾ ನಾಗನೂರ ಹಾಗೂ ಕ ವಿ ವಿ ವೇಮನ ಪೀಠದ ಸಂಯೋಜಕ ರಾದ ಡಾ.ನೀಲಗುಂದ ಮುಂತಾದವರು ಉಪಸ್ಥಿತರಿದ್ದರು.
ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ