BusinessLatestTravel

*ಕ್ಲಾಸಿಕ್ ಲುಕ್ ನಲ್ಲಿ 3 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ವೆಸ್ಪಾ*

ಪ್ರಗತಿವಾಹಿನಿ ಸುದ್ದಿ: ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಕ್ಲಾಸಿಕ್ ಲುಕ್ ನ ವೆಸ್ಪಾ ಜಾಗತಿಕ ಮಾರುಕಟ್ಟೆಗಾಗಿ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ.

ಈ ಹೊಸ ಸೀರಿಸ್​ ವೆಸ್ಪಾದ ಸಾಂಪ್ರದಾಯಿಕ ವಿನ್ಯಾಸ, ಮೊನೊಕಾಕ್ ಚಾಸಿಸ್ (Monocoque chassis) ಮತ್ತು ಹಳೆಯ ಜನಪ್ರಿಯ ಮಾದರಿಗಳ ಹೆಸರುಗಳನ್ನೇ ಉಳಿಸಿಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವೆಸ್ಪಾದ ಈ ಮೂರು ವಿನ್ಯಾಸಗಳು ಯಾವವು? ಏನಿದರ ವಿಶೇಷತೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಅತ್ಯಾಧುನಿಕ ಎಲೆಕ್ಟ್ರಿಕ್ ಪವರ್‌ಟ್ರೇನ್ ಅಳವಡಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿರುವ ವೆಸ್ಪಾದ ಮೂರು ವಿನ್ಯಾಸಗಳೆಂದರೆ ‘ವೆಸ್ಪಾ ಸ್ಪ್ರಿಂಟ್ ಎಸ್’, ‘ವೆಸ್ಪಾ ಪ್ರಿಮಾವೆರಾ’, ‘ವೆಸ್ಪಾ ಪ್ರಿಮಾವೆರಾ ಟೆಕ್’.

ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಾಮರ್ಥ್ಯ ಮತ್ತು ಬ್ಯಾಟರಿ ವಿವರ:
ಈ ಎಲ್ಲ ಮೂರು ಸ್ಕೂಟರ್‌ಗಳು ವೆಸ್ಪಾದ ಐಕಾನಿಕ್ ವಿನ್ಯಾಸವನ್ನು ಹೊಂದಿವೆ. ಕಂಪನಿಯ ಪೆಟ್ರೋಲ್ (ICE) ಮಾದರಿಗಳು ಮತ್ತು ಈ ಎಲೆಕ್ಟ್ರಿಕ್ ಆವೃತ್ತಿಗಳ ನಡುವಿನ ಏಕೈಕ ಬಾಹ್ಯ ವ್ಯತ್ಯಾಸವೆಂದರೆ ಎಕ್ಸಾಸ್ಟ್ ಸಿಸ್ಟಮ್ (ಸೈಲೆನ್ಸರ್) ಇಲ್ಲದಿರುವುದು.

ಸ್ಪ್ರಿಂಟ್ ಎಸ್ ಮತ್ತು ಪ್ರಿಮಾವೆರಾ ಈ ಎರಡೂ ಸ್ಕೂಟರ್‌ಗಳು ಒಂದೇ ರೀತಿಯ ಪವರ್‌ಟ್ರೇನ್ ಹೊಂದಿದ್ದು, 3.1kW ಮೋಟಾರ್ ಮತ್ತು 2.3kWh ತೆಗೆಯಬಹುದಾದ (Removable) ಬ್ಯಾಟರಿ ಪ್ಯಾಕ್ ಒಳಗೊಂಡಿವೆ. ಈ ಮೋಟಾರ್ 2.7kW ನಿರಂತರ ಶಕ್ತಿ ಮತ್ತು ಗರಿಷ್ಠ 200Nm ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಸ್ಕೂಟರ್‌ಗಳು ಗಂಟೆಗೆ 45 ಕಿ.ಮೀ (45 kmph) ಗರಿಷ್ಠ ವೇಗ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 68 ಕಿ.ಮೀ (WMTC-rated) ರೇಂಜ್ ನೀಡುತ್ತವೆ. 500W ಚಾರ್ಜರ್ ಬಳಸಿ ಬ್ಯಾಟರಿಯನ್ನು ಶೇ. 0 ದಿಂದ 80 ರವರೆಗೆ ಚಾರ್ಜ್ ಮಾಡಲು ಸುಮಾರು 4 ಗಂಟೆ ಬೇಕಾಗುತ್ತದೆ. ಬ್ಯಾಟರಿ ಸಹಿತ ಇವುಗಳ ತೂಕ 111 ಕೆಜಿ ಇದೆ.

ವೆಸ್ಪಾ ಪ್ರಿಮಾವೆರಾ ಟೆಕ್ (ಪ್ರೀಮಿಯಂ ಮಾದರಿ ಇದು ಈ ಸೀರಿಸ್​ನ ಅತ್ಯಂತ ಪ್ರೀಮಿಯಂ ಸ್ಕೂಟರ್ ಆಗಿದ್ದು, ದೊಡ್ಡದಾದ 4.2kWh ಬ್ಯಾಟರಿ ಪ್ಯಾಕ್ ಮತ್ತು 3.6kW ನಿರಂತರ ಶಕ್ತಿ ನೀಡುವ ಹೆಚ್ಚು ಶಕ್ತಿಶಾಲಿ ಮೋಟಾರ್ ಹೊಂದಿದೆ. ದೊಡ್ಡ ಬ್ಯಾಟರಿಯ ಸಹಾಯದಿಂದ ಇದು ಒಮ್ಮೆ ಚಾರ್ಜ್ ಮಾಡಿದರೆ 80 ಕಿ.ಮೀ (WMTC-rated) ರೇಂಜ್ ನೀಡುತ್ತದೆ. ಇದರ ತೂಕ 130 ಕೆಜಿ ಇದೆ.

ಈ ಸ್ಕೂಟರ್‌ಗಳಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ (ಮೊದಲ ಮೂರು ವರ್ಷ ಉಚಿತ, ನಂತರ ಅಪ್​ಡೇಟ್​ ಅಗತ್ಯ) ಹೊಂದಿರುವ 4.3-ಇಂಚಿನ ಟಿಎಫ್‌ಟಿ (TFT) ಡಿಸ್‌ಪ್ಲೇ, ಕೀ-ಲೆಸ್ ಇಗ್ನಿಷನ್, ‘ಫೈಂಡ್ ಮೈ ಸ್ಕೂಟರ್’ (Find My Scooter) ವೈಶಿಷ್ಟ್ಯ ಹಾಗೂ ಇಕೋ (Eco) ಮತ್ತು ಪವರ್ (Power) ಎಂಬ ಎರಡು ರೈಡ್ ಮೋಡ್‌ಗಳಿವೆ.

ಮೂರು ಮಾದರಿಗಳು ಆಲ್-ಎಲ್‌ಇಡಿ (All-LED) ಲೈಟಿಂಗ್, 12/11-ಇಂಚಿನ ವೀಲ್ ಸೆಟಪ್, ಮುಂಭಾಗದಲ್ಲಿ 110-ಸೆಕ್ಷನ್ ಮತ್ತು ಹಿಂಭಾಗದಲ್ಲಿ 120-ಸೆಕ್ಷನ್ ಟೈರ್‌ಗಳನ್ನು ಹೊಂದಿವೆ. ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ 200mm ಡಿಸ್ಕ್ ಮತ್ತು ಹಿಂಭಾಗದಲ್ಲಿ 140mm ಡ್ರಮ್ ಬ್ರೇಕ್ ನೀಡಲಾಗಿದ್ದು, ಪ್ರಿಮಾವೆರಾ ಟೆಕ್ ಮಾದರಿಯು ಹೆಚ್ಚುವರಿಯಾಗಿ ಸಿಂಗಲ್-ಚಾನೆಲ್ ಎಬಿಎಸ್ (ABS) ಹೊಂದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button