Latest

ನಟ ಅಕ್ಷಯ್ ಕುಮಾರ್ ಚಿರಯೌವ್ವನ ಶ್ಲಾಘಿಸಿದ ಚಿರಂಜೀವಿ

ಪ್ರಗತಿವಾಹಿನಿ ಸುದ್ದಿ, ಪಣಜಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿರಯೌವ್ವನವನ್ನು ನಟ ಚಿರಂಜೀವಿ ತಮ್ಮದೇ ಆದ ಪರಿಭಾಷೆಯಲ್ಲಿ ವರ್ಣಿಸಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಕ್ಷಯ್ ಕುಮಾರ್ ವೇದಿಕೆಗೆ ಬಂದಾಗ ಅವರನ್ನು ಕುರಿತು ಚಿರಂಜೀವಿ “ಇವರು ನನ್ನ ಸಮಕಾಲೀನ ಮಿತ್ರರು. ಆದರೆ ಇವತ್ತಿಗೂ ನನ್ನ ಮಗ ರಾಮ್ ಚರಣ್ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಇದು  ಅಕ್ಷಯ್ ಕುಮಾರ್ ಅವರ ಶಕ್ತಿ.” ಎಂದು ಹೇಳುವ ಮೂಲಕ ಅಕ್ಷಯ್ ಕುಮಾರ್ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಚಿರಂಜೀವಿ ಅವರ ಈ ಮಾತುಗಳಿಗೆ ಅಕ್ಷಯ್ ಕುಮಾರ್ ತಲೆಬಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವ ವಿಡಿಯೊ ಎಲ್ಲೆಡೆ ವ್ಯಾಪಕವಾಗಿ ಹರಿದಾಡತೊಡಗಿದೆ.

 ಕಾರಿನ ಸ್ಟೆಪ್ನಿಯಲ್ಲಿ 94 ಬಂಡಲ್ ನಗದು ಪತ್ತೆ: ಬಿಜೆಪಿ ಹವಾಲಾ ಹಣ ಎಂದ ದೀದಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button