Kannada NewsKarnataka NewsLatest

25 ಸಾವಿರದ ಗುರಿ ಮುಟ್ಟಿದ ಹಿತ ಚಿಂತಕರ ಅಭಿಯಾನ: ಮಂಗಳವಾರ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಹಮ್ಮಿಕೊಂಡಿದ್ದ ಹಿತಚಿಂತಕ ಅಭಿಯಾನ ಸಂಪೂರ್ಣವಾಗಿದೆ. ಗುರಿಯಂತೆ 25 ಸಾವಿರ ಸದಸ್ಯರ ಗುರಿಯನ್ನು ತಲುಪಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಅಭಿಯಾನ ಯಶಸ್ಸಿಗೆ ಶ್ರಮಿಸಿದವರ ಹಾಗೂ ಮಠಾಧೀಶರ ಸಮಾವೇಶ ನಡೆಯಲಿದೆ. ಸಂಜೆ 5 ಗಂಟೆಗೆ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಸಮಾವೇಶ ನಡೆಯಲಿದ್ದು, ಹಲವಾರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಶ್ವಹಿಂದೂ ಪರಿಷತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Home add -Advt

Related Articles

Back to top button