
ರಾಜಕೀಯ ಸಮಾರಂಭಗಳಿಗೆ 500 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಪಚುನಾವಣೆ ವೇಳೆ ರ್ಯಾಲಿಗಳನ್ನು ಹೇಗೆ ನಡೆಯಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2,298 ಜನರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಜಾರಿ ಮಾಡಿದೆ.
ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ. ಸಭೆ, ಸಮಾರಂಭ, ರ್ಯಾಲಿ ಆಯೋಜಕರಿಗೆ ಹಾಗೂ ಹೋಟೆಲ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ 10,000 ರೂ ದಂಡ ವಿಧಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.
* ಮಾಸ್ಕ್ ಸಾಮಾಜಿಕ ಅಂತರ ಕಡ್ಡಾಯ. ನಗರಗಳಲ್ಲಿ ಮಾಸ್ಕ್ ಧರಿಸದಿದ್ದರೆ 250 ರೂ ದಂಡ
* ಪಾಲಿಕೆ ವ್ಯಾಪ್ತಿಯ ಹೊರಗೆ 100 ರೂ ದಂಡ
* ಮದುವೆಗಳಿಗೆ 200 ಜನರಿಗೆ ಮಾತ್ರ ಅವಕಾಶ
* ಧಾರ್ಮಿಕ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ
* ರಾಜಕೀಯ ಸಭೆ, ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ
* ನಿಯಮ ಮೀರಿದರೆ ಕಾರ್ಯಕ್ರಮ ಆಯೋಜಕರಿಗೆ 10,000 ದಂಡ
* ಎಸಿ ಪಾರ್ಟಿ ಹಾಲ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್ ಗಳಿಗೆ 10,000 ರೂ ದಂಡ
* ನಾನ್ ಎಸ್ ಸಿ ಪಾರ್ಟಿ ಹಾಲ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್ ಗಳಿಗೆ 5000 ರೂ ದಂಡ
ರಾಜಕೀಯ ಸಮಾರಂಭಗಳಿಗೆ 500 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಉಪಚುನಾವಣೆ ವೇಳೆ ರ್ಯಾಲಿಗಳನ್ನು ಹೇಗೆ ನಡೆಯಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಸಮಗ್ರ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – HFW 146 CGM 2020001