Kannada NewsKarnataka NewsNationalPolitics

*ಉಪ ರಾಷ್ಟ್ರಪತಿ ರಾಜಿನಾಮೆ*

ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದ ಕಾರಣ ನೀಡಿ ಉಪ ರಾಷ್ಟ್ರಪತಿ ಜಗದೀಪ್ ಧನ್ಗ‌ರ್ ಅವರು  ರಾಜೀನಾಮೆ ನೀಡಿದ್ದಾರೆ. 

ಆರೋಗ್ಯ ಕಾಪಾಡಿಕೊಳ್ಳಲು ಮತ್ತು ವೈದ್ಯರ ಸಲಹೆ ಪಾಲಿಸಲು, ಸಂವಿಧಾನದ 67(ಎ) ವಿಧಿಯ ಪ್ರಕಾರ, ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

‘ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ದೇಶದ ಜನತೆಗೆ, ರಾಷ್ಟ್ರಪತಿ, ಪ್ರಧಾನಿಗೂ ಅವರು ಧನ್ಯವಾದ ಎಂದು ಹೇಳಿದ್ದಾರೆ. ಕೆಲಸ ಮಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಸೂಚನೆ ನೀಡಿದ್ದಾರೆ’ ಎಂದಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ನನಗೆ ಅಚಲ ಬೆಂಬಲ ನೀಡಿದ ಭಾರತದ ಘನತೆವೆತ್ತ ರಾಷ್ಟ್ರಪತಿಯವರಿಗೆ ನಾನು ನನ್ನ ಹೃತ್ತೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಗೌರವಾನ್ವಿತ ಮಂತ್ರಿ ಮಂಡಳಿಗೆ ಹೃತೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

Home add -Advt

ಪ್ರಧಾನಮಂತ್ರಿಗಳ ಸಹಕಾರ ಮತ್ತು ಬೆಂಬಲ ಅತ್ಯಮೂಲ್ಯವಾದುದು. ನಾನು ಅಧಿಕಾರದಲ್ಲಿರುವಾಗ ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ನಮ್ಮ ಮಹಾನ್ ಪ್ರಜಾಪ್ರಭುತ್ವದಲ್ಲಿ ಉಪಾಧ್ಯಕ್ಷರಾಗಿ ನಾನು ಗಳಿಸಿದ ಅನುಭವಗಳಿಗೆ ಹೃತೂರ್ವಕ ಕೃತಜ್ಞನಾಗಿದ್ದೇನೆ. ಈ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಯನ್ನು ನೋಡುವುದು, ಅದರಲ್ಲಿ ಭಾಗಿಯಾಗುವುದು ನನಗೆ ತೃಪ್ತಿ ತಂದಿದೆ. ಅತ್ಯಂತ ಗೌರವ ಮತ್ತು ಕೃತಜ್ಞತೆಯಿಂದ, ಎಂದು ಅವರು ರಾಜೀನಾಮೆ ನೀಡಿದ್ದಾರೆ.

Related Articles

Back to top button