ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿದ್ದ ರೆಮ್ ಡಿಸಿವಿರ್ ಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಆಸ್ಪತ್ರೆಗಳಲ್ಲೇ ರೆಮ್ ಡಿಸಿವಿರ್ ಔಷಧ ಕಳ್ಳತನವಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿಗಳನ್ನೂ ಕಳ್ಳತನ ಮಾಡಲಾಗಿದ್ದು, ಆಸ್ಪತ್ರೆ ಸಿಬ್ಬಂದಿಗಳ ಮೇಲೆಯೇ ಅನುಮಾನ ಶುರುವಾಗಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ಹಲವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಪಂಗಸ್ ಚಿಕಿತ್ಸೆಗೆ ಸಂಗ್ರಹಿಸಿಟ್ಟಿದ್ದ 10 ವಯಲ್ಸ್ ಔಷಧ ನಾಪತ್ತೆಯಾಗಿದೆ.
ಕರ್ತವ್ಯದಲ್ಲಿದ್ದ ನಾಲ್ವರು ಡ್ಯೂಟಿ ವೈದ್ಯರುಗಳ ಮೇಲೆಯೇ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಆಸ್ಪತ್ರೆ ಸಿಸಿಟಿವಿ ಕ್ಯಾಮರಾ ಪರಿಶೀಲನೆಯಲ್ಲಿ ತೊಡಗಿದ್ದಾರೆ. ವೈದ್ಯರ ಅನುಮತಿಯಿಲ್ಲದೇ ಔಷಧ ಹೊರ ತೆಗೆಯುವಂತಿಲ್ಲ ಎಂಬ ನಿಯಮವಿರುವುದರಿಂದ ವೈದ್ಯರ ಮೇಲೆ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಚಿಂಚಲಿ ಗ್ರಾಮದಲ್ಲಿ 70 ಜನರ ಸಾವು; ಬೆಚ್ಚಿಬಿದ್ದ ಜನರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ