Karnataka News

ಭಾಗವತಿ ಬಳಿ ಮಧ್ಯರಾತ್ರಿ ಹುಲಿಗಳೆರಡು ಓಡಾಡುವ ವೀಡಿಯೋ ವೈರಲ್

 
ಪ್ರಗತಿವಾಹಿನಿ ಸುದ್ದಿ, ಹಳಿಯಾಳ :- ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ ಹಳಿಯಾಳ ಗಡಿ ಗ್ರಾಮವಾದ ಭಾಗವತಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ 1.30ರ ಸುಮಾರಿಗೆ 2 ಹುಲಿಗಳು ರಾಜಾರೋಷವಾಗಿ ರಸ್ತೆಯ ಮೇಲೆ‌ ಸಂಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 ಹುಲಿಗಳು ರಸ್ತೆಯ ಮೇಲೆ ಸಂಚರಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಇನ್ನೂ ಖಚಿತವಾಗಬೇಕಿದೆ.
ದಟ್ಟ ಅರಣ್ಯದಿಂದ ಕೂಡಿರುವ ಈ ಭಾಗದಲ್ಲಿ ಆಗಾಗ್ಗೆ ಅತಿ ವಿರಳವಾಗಿ  ಒಂದು ಹುಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಎರಡು ಹುಲಿಗಳು ಕಾಣಿಸಿರುವುದು
ಈ ಭಾಗದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಕಾರಿನಲ್ಲಿ ಕುಳಿತು ಮಾಡಿರುವ ವೀಡಿಯೋ ಇದಾಗಿದ್ದು, ಮರಾಠಿ ಭಾಷೆಯಲ್ಲಿ ಮಾತನಾಡುತ್ತಿರುವುದು ರೆಕಾರ್ಡ್ ಆಗಿದೆ.
 ಇದು ಭಾಗವತಿಯೇ ನಿಜವೇ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಖಚಿತಪಡಿಸಬೇಕಿದೆ.
https://youtu.be/b58geTt0qqI

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button