ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಜಿಲ್ಲೆಗಳಲ್ಲಿ ಮೋರ್ಚಾ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ, ರಥ ಯಾತ್ರೆಗಳಿಗೆ ಉಸ್ತುವಾರಿಗಳನ್ನು ನೀಮಕ ಮಾಡಿದೆ.
ಯಾತ್ರೆ ಪ್ರಮುಖರಾಗಿ ಸಚಿವರ ಸಿಸಿ ಪಾಟೀಲ್, ಪಕ್ಷದ ಎಲ್ಲ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ಬಿ.ವೈ ವಿಜಯೇಂದ್ರ, ಫಲಾನುಭವಿಗಳ ಸಮ್ಮೇಳನದ ಸಂಚಾಲಕರಾಗಿ ಹಾಲಪ್ಪ ಆಚಾರ ನೇಮಕಗೊಂಡಿದ್ದಾರೆ.
ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಸಂಚಾಲಕರಾಗಿ ಸಚಿವರಾದ ಸುಧಾಕರ್ ನೇಮಕಗೊಂಡಿದ್ದಾರೆ. ಸಚಿವ ಬಿ.ಸಿ.ನಾಗೇಶ, ತೇಜಸ್ವಿ ಅನಂತಕುಮಾರ, ತೇಜಸ್ವಿ ಸೂರ್ಯ, ಸುರೇಶ ಕುಮಾರ, ಅಭಯ ಪಾಟೀಲ, ಪಿ.ರಾಜೀವ, ರಾಜಕುಮಾರ ಪಾಟೀಲ, ಎನ್. ಮಹೇಶ, ಕೆ.ಎಸ್.ನವೀನ್, ಸಮೀರ ಕಾಗಲಕರ್, ಡಾ.ಪ್ರಕಾಶ, ರವೀಂದ್ರ ಪೈ, ವಿಶ್ವನಾಥ ಭಟ್, ಮಾಳವಿಕ ಅವಿನಾಶ ಸಮಿತಿಯಲ್ಲಿದ್ದಾರೆ.
ಯಾತ್ರೆಗಳ ಸಂಚಾಲಕರಾಗಿ ಚಲವಾದಿ ನಾರಾಯಣ ಸ್ವಾಮಿ, ರಘುನಾಥ್‌ರಾವ್ ಮಲ್ಕಾಪುರೆ, ಅರುಣ್ ಶಹಾಪುರ, ಎಂ. ರಾಜೇಂದ್ರ ನೇಮಕವಾಗಿದ್ದಾರೆ.
ವಿಡಿಯೋ ವ್ಯಾನ್ ಪ್ರಚಾರ ಪ್ರಮುಖರಾಗಿ ಎಸ್.ವಿ.ರಾಘವೇಂದ್ರ, ಪ್ರೇಮಾನಂದ ಶೆಟ್ಟಿ, ಭಾರತಿ ಮಗ್ದುಂ, ಅಜಿತ್ ಹೆಗಡೆ ಬಳ್ಳಿಕೇರಿ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯದಾದ್ಯಂತ ನಡೆಯಲಿರುವ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ ಪ್ರಮುಖರಾಗಿ ನಿಯುಕ್ತಿಗೊಂಡಿರುವ ಎಲ್ಲರಿಗೂ ಅಭಿನಂದನೆಗಳು. ಎಲ್ಲ ಪ್ರಮುಖರ ನೇತೃತ್ವದಲ್ಲಿ ಅಭಿಯಾನಗಳು ಯಶಸ್ವಿಯಾಗಿ ನಡೆದು ನಿಶ್ಚಿತವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ.
ಎಲ್ಲರಿಗೂ ಶುಭಾಶಯಗಳು. #BJPYeBharavase pic.twitter.com/G9lswWHNwA
— BJP Karnataka (@BJP4Karnataka) February 8, 2023
ರಾಜ್ಯದಾದ್ಯಂತ ನಡೆಯಲಿರುವ ವಿಡಿಯೋ ವ್ಯಾನ್ ಪ್ರಚಾರ ಪ್ರಮುಖರಾಗಿ ನಿಯುಕ್ತಿಗೊಂಡಿರುವ ಎಲ್ಲರಿಗೂ ಅಭಿನಂದನೆಗಳು. ವಿಡಿಯೋ ವ್ಯಾನ್ ಪ್ರಚಾರದ ಮೂಲಕ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಮನೆ ಮನೆಗೆ ತಲುಪಿ ಯಶಸ್ವಿಯಾಗಿ ರಾಜ್ಯದಲ್ಲಿ ಮತ್ತೊಮ್ಮೆ ನಿಶ್ಚಿತವಾಗಿ ಕಮಲ ಅರಳಲಿದೆ.
ಎಲ್ಲರಿಗೂ ಶುಭಾಶಯಗಳು. #BJPYeBharavase pic.twitter.com/aOJldvGFfp
— BJP Karnataka (@BJP4Karnataka) February 8, 2023
*ಸಿದ್ದರಾಮಯ್ಯಗೆ ಅಭಿಮಾನಿಯಿಂದ 1 ಕೋಟಿ ರೂಪಾಯಿ ಭರ್ಜರಿ ಆಫರ್*
https://pragati.taskdun.com/siddaramaiahhosapetevidhanasabha-election1-crore-offer/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ