*ಮುಂದಿನ ಮುಖ್ಯಮಂತ್ರಿ ಬಗ್ಗೆ ಸುಳಿವು ನೀಡಿದ ಶ್ವಾನ; ನಿಜವಾಗುತ್ತಾ ಭವಿಷ್ಯ?*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಕುತೂಹಲದ ವಿದ್ಯಮಾನವೊಂದು ನಡೆದಿದೆ. ಮುಂದಿನ ಸಿಎಂ ಯಾರಾಗಲಿದ್ದಾರೆ ಎಂದು ಕಾಲ ಭೈರವನ ಪ್ರತಿರೂಪವಾದ ಶ್ವಾನವೊಂದು ಭವಿಷ್ಯ ನುಡಿದೆ.

ಮುಂದಿನ ಸಿಎಂ ಬಗ್ಗೆ ಪ್ರಶ್ನಿಸಿದಾಗ ಹೆಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರವನ್ನು ತೋರಿಸುವ ಮೂಲಕ ಶ್ವಾನ, ಕುಮರಸ್ವಾಮಿ ಮುಂದಿನ ಸಿಎಂ ಎಂದು ಸುಳಿವು ನೀಡಿದೆ.

ಮಂಡ್ಯ ಜಿಲ್ಲೆಯ ಅಶೋಕನಗರದ ನಿವಾಸದಲ್ಲಿ ಭೈರವ ಎಂಬ ಶ್ವಾನ ಈ ಭವಿಷ್ಯ ನುಡಿದಿದೆ. ಭೈರವ ಶ್ವಾನದ ಮಾಲೀಕ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮುಂದಿನ ಸಿಎಂ ಬಗ್ಗೆ ಪ್ರಶ್ನೆ ಮಾಡಿದ್ದು ಶ್ವಾನ ಹೆಚ್.ಡಿ.ಕುಮಾರಸ್ವಾಮಿ ಭಾವಚಿತ್ರ ತೋರಿಸಿದೆ.

Home add -Advt

ಕಳೆದ ಎರಡು ವರ್ಷಗಳಿಂದ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆಯಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ವಾನದ ಭವಿಷ್ಯ ನಿಜವಾಗಲಿದೆಯೇ ಕಾದು ನೋಡಬೇಕು.

https://pragati.taskdun.com/d-b-inamadardeathbelagavi/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button