*ದಳಪತಿಗಳಿಗೆ ಶಾಕ್ ಮೇಲೆ ಶಾಕ್; ನಗರಸಭೆ ಜೆಡಿಎಸ್ ಅಧ್ಯಕ್ಷೆ ಸೇರಿದಂತೆ 11 ಸದಸ್ಯರು ಸಾಮೂಹಿಕ ಕಾಂಗ್ರೆಸ್ ಸೇರ್ಪಡೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ ಜೆಡಿಎಸ್ ಸದಸ್ಯರು. ನಗರಸಭೆಯ ಜೆಡಿಎಸ್ ಅಧ್ಯಕ್ಷೆ ಸೇರಿದಂತೆ ಹತ್ತು ಸದಸ್ಯರು ಸಾಮೂಹಿಕವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ, ಬೆಮಲ್ ಕಾಂತರಾಜು, ಕೆಪಿಸಿಸಿ ಸದಸ್ಯರು ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್. ಶ್ರೀನಿವಾಸ್ ಇವರ ನೇತೃತ್ವದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್ ಹಾಲಿ ಅಧ್ಯಕ್ಷರು ಮತ್ತು 10 ಜನ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಪ್ರಮುಖ ಮುಖಂಡರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನೆಲಮಂಗಲ ನಗರಸಭೆಯಲ್ಲಿ 14 ಮಂದಿ ಜೆಡಿಸ್ ಸದಸ್ಯರಿದ್ದು, ಅವರಲ್ಲಿ 11 ಮಂದಿ ಕಾಂಗ್ರೆಸ್ ಗೆ ಬೆಷರತ್ ಸೇರ್ಪಡೆಯಾಗಿದ್ದಾರೆ.
ಡಿ ಕೆ ಶಿವಕುಮಾರ್ ಅವರ ಸದಾಶಿವನಗರ ಗೃಹಕಛೇರಿ ಬಳಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದ ಪ್ರಮುಖರ ಪಟ್ಟಿ ಇಂತಿದೆ:
1.ಲತಾ ಹೇಮಂತ್ ಕುಮಾರ್, ಅಧ್ಯಕ್ಷರು
2.ರಾಜಮ್ಮ ಪಿಳ್ಳಪ್ಪ, ಸದಸ್ಯರು
3.ಆನಂದ್,ಸದಸ್ಯರು
5.ಆಂಜಿನಪ್ಪ,ಸದಸ್ಯರು
6.ಅಂಜನಮೂರ್ತಿ( ಪಾಪಣಿ),ಸದಸ್ಯರು
7.ದಾಕ್ಷಾಯಿಣಿ ರವಿ ಕುಮಾರ್, ಸದಸ್ಯರು
8.ಪ್ರಸಾದ್, ಸದಸ್ಯರು
9.ಚೇತನ್, ಸದಸ್ಯರು
10.ಪುಷ್ಪಲತಾ ಮಾರೇಗೌಡ, ಸದಸ್ಯರು
11.ಭಾರತಿ ಬಾಯಿ ನಾರಾಯಣ್ ರಾವ್ ,ಸದಸ್ಯರು
*ಹಾವೇರಿ BJP ಪಾಳಯದಲ್ಲಿ ಸಂಚಲನ ಮೂಡಿಸಿದ ಡಿ.ಕೆ.ಶಿವಕುಮಾರ್ ಹೇಳಿಕೆ*
https://pragati.taskdun.com/d-k-shivakumarhaveribjp-mlascongress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ