Uncategorized

*ಕದನ ಕಣದಲ್ಲಿ 8 ಸಚಿವರಿಗೆ ಹಿನ್ನಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣಾ ಮತ ಎಣಿಕೆ ಚುರುಕುಗೊಂಡಿದ್ದು, ಈ ಬಾರಿ ಕದನಕಣದಲ್ಲಿ 8 ಸಚಿವರು ಆರಂಭಿಕವಾಗಿ ಹಿನ್ನಡೆಯಲಿದ್ದಾರೆ.

ಮುಧೋಳದಲ್ಲಿ ಸಚಿವ ಗೋವಿಂದ ಕಾರಜೋಳ ಆರಂಭಿಕ ಹಿನ್ನಡೆಯಲಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಸುಧಾಕರ್ ಗೆ ಹಿನ್ನಡೆಯಾಗಿದೆ. ನರಗುಂದದಲ್ಲಿ ಸಚಿವ ಸಿ.ಸಿ.ಪಾಟೀಲ್ ಅವರಿಗೂ ಆರಂಭಿಕ ಹಿನ್ನಡೆಯಾಗಿದೆ. ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಅವರೂ ಹಿನ್ನಡೆಯಾಗಿದೆ. ಇಲ್ಲಿ ಕಾಂಗ್ರೆಸ್ ನ ಶರತ್ ಬಚ್ಚೇಗೌಡ ಮುನ್ನಡೆಯಲಿದ್ದಾರೆ.

ಬಳ್ಳಾರಿ ಗ್ರಾಮೀಣದಲ್ಲಿ ಸಚಿವ ಶ್ರೀರಾಮುಲುಗೆ ಹಿನ್ನಡೆಯಾಗಿದೆ. ಬಳ್ಳಾರಿ ಗ್ರಾಮೀಣದಲ್ಲಿ ಕಾಂಗ್ರೆಸ್ ನ ನಾಗೇಂದ್ರ ಮುನ್ನಡೆಯಲಿದ್ದಾರೆ. ಸಚಿವ ಬಿ.ಸಿ.ಪಾಟೀಲ್ ಕೂಡ ಹಿನ್ನಡೆಯಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಹಿನ್ನಡೆಯಲ್ಲಿದ್ದಾರೆ. ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ ಹಿನ್ನಡೆಯಲ್ಲಿದ್ದಾರೆ.

: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ್ ಆರಂಭಿಕ ಮುನ್ನಡೆಯಲ್ಲಿದ್ದಾರೆ.

ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಹಿನ್ನಡೆ ಅನುಭವಿಸಿದ್ದಾರೆ.

ಗೋಕಾಕ್ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಎರಡನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ.

ರಮೇಶ್ ಜಾರಕಿಹೊಳಿಗೆ ಎರಡನೇ ಸುತ್ತಿನಲ್ಲೂ ಹಿನ್ನಡೆ.

ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ

ಬಿಜೆಪಿ: 6532

ಕಾಂಗ್ರೆಸ್: 6726

ಮುನ್ನಡೆ 194

ನಿಪ್ಪಾಣಿ‌ ಮೊದಲ ಸುತ್ತು ಮುಕ್ತಾಯ 

NCP 3555

Congress 2877

Bjp – 2780 

Ncp lead 777

ಕಿತ್ತೂರು ವಿಧಾನ ಸಭೆ ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡರ್ 2965 ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ್ 3303. 337 ಮಾತಗಳ ಮುನ್ನಡೆ ಕಾಯ್ದುಕೊಂಡ ಬಾಬಾಸಾಹೇಬ್ ಪಾಟೀಲ

ರಾಯಬಾಗ ಮೊದಲನೇ‌ ಸುತ್ತಿನ ಮತ ಎಣಿಕೆ ಮುಕ್ತಾಯ.

ರಾಯಬಾಗ ಕ್ಷೇತದಲ್ಲಿ ಬಿಜೆಪಿಗೆ ಮುನ್ನಡೆ.

ಬಿಜೆಪಿ – ದುರ್ಯೋಧನ ಐಹೊಳೆ – 3910

ಕಾಂಗ್ರೆಸ್ – ಮಹಾವೀರ್ ಮೊಹಿತೆ –  389 

ಪಕ್ಷೇತರ – ಶಂಭು ಕಲ್ಲೋಳಿಕರ – 3093

ಹುಕ್ಕೇರಿ ಮತಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಎರಡನೇ ಸುತ್ತಿನಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿಯ ನಿಖೀಲ ಕತ್ತಿ 2945 ಮುನ್ನೆಡೆ

ಬಿಜೆಪಿ : ನಿಖೀಲ ಕತ್ತಿ -9757

ಕಾಂಗ್ರೆಸ್ : ಎ ಬಿ ಪಾಟೀಲ- 6812

https://pragati.taskdun.com/vidhanasabha-electionvote-countingstart-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button