Latest

ಮೀಸಲಾತಿ ಗದ್ದಲ; ಆಡಳಿತ ಪಕ್ಷದ ಸದಸ್ಯರಿಂದಲೇ ಸದನದ ಬಾವಿಗಿಳಿದು ಹೋರಾಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೀಸಲಾತಿ ಹೋರಾಟದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಲವು ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ನೀಡುತ್ತಿಲ್ಲ, ಕಲೆದ 20 ವರ್ಶಗಳಿಂದ ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶ್ರೀರಾಮುಲು, ಮಿಸಲಾತಿ ವಿಚಾರ ತುಂಬಾ ಸೂಕ್ಷ್ಮವಾದದ್ದು, ಕೆಲ ಕಾನೂನಾತ್ಮಕ ಸಮಸ್ಯೆಗಳಿದ್ದು, ಶೀಘ್ರದಲ್ಲಿಯೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಸಚಿವರ ಹೇಳಿಕೆಗೆ ಗರಂ ಆದ ಶಾಸಕ ಯತ್ನಾಳ್ ಈ ವಿಚಾರವನ್ನು ಚರ್ಚೆಗೆ ಅವಕಾಶ ನಿಡಬೇಕು ಎಂದರು. ಇದಕ್ಕೆ ಸ್ಪೀಕರ್ ನಿರಾಕರಿಸಿದರು.

ಚರ್ಚೆಗೆ ಅವಕಾಶ ನೀಡದ್ದನ್ನು ಖಂಡಿಸಿದ ಯತ್ನಾಳ, ಅರವಿಂದ ಬೆಲ್ಲದ್ ಹಗಊ ಸಿದ್ದು ಸವದಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಡಳಿತ ಪಕ್ಷದ ಶಾಸಕರಿಗೆ ಜೆಡಿಎಸ್ ಶಾಸಕರಾದ ಬಂಡೆಪ್ಪ ಕಾಶಂಪೂರ್, ಕಾಂಗ್ರೆಸ್ ನ ಕುಸುಮಾ ಶಿವಳ್ಳಿ, ಯತೀಂದ್ರ ಸಿದ್ದರಾಮಯ್ಯ ಬೆಂಬಲ ನೀಡಿದರು. ಪ್ರತಿಭಟನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದರು.

Home add -Advt

Related Articles

Back to top button