ಬೆಂಗಳೂರಿನ ರಸ್ತೆಯಲ್ಲಿ ಬೋಟ್ ನಲ್ಲಿ ಹೋಗಬೇಕಾದ ಸ್ಥಿತಿ; ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ರಾಜಧಾನಿ ಪ್ರವಾಹ ಪರಿಸ್ಥಿತಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ವಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ರಸ್ತೆಗಳಲ್ಲಿ ಬೋಟ್ ನಲ್ಲಿ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಬೆಂಗಳೂರಿನ ಇತಿಹಾಸದಲ್ಲಿಯೇ ಇಂತಹ ಸ್ಥಿತಿ ಬಂದಿರಲಿಲ್ಲ. ಬಿಜೆಪಿ ಸರ್ಕಾರ ರಾಜಕಲುವೆಗಳ ಒತ್ತುವರಿ ತೆರವಿಗೆ ಮುಂದಾಗದಿರುವುದೇ ಅವಾಂತರಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನೇ ಸ್ವತ: ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಪ್ರವಾಹ ಪರಿಶೀಲನೆ ನಡೆಸಿದ್ದೇನೆ. ರಸ್ತೆಯಲ್ಲಿ ಬೋಟ್ ಗಳಲ್ಲಿ ಹೋಗಬೇಕಾದ ಸ್ಥಿತಿ. ಬಡಾವಣೆಗಳಲ್ಲಿ ನೀರು ನಿಂತಿದೆ. ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕ್ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಸಮಸ್ಯೆಯಾಗಿದೆ. ಇಷ್ಟೆಲ್ಲ ಸಮಸ್ಯೆಗಳಾಗುತ್ತಿದ್ದರು ಸರ್ಕಾರ ಇನ್ನು ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅರವಿಂದ ಲಿಂಬಾವಳಿ, ಬೋಟ್ ನಲ್ಲಿ ಹೋಗುವ ಸ್ಥಿತಿಯೇನೂ ಇರಲಿಲ್ಲ ಬೇರೆ ರಸ್ತೆಯಲ್ಲಿಯೂ ಹೋಗಬಹುದಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಸಿದ್ದರಾಮಯ್ಯ, ನಾನೇನು ನನ್ನ ಸ್ವಂತ ಬೋಟ್ ನಲ್ಲಿ ಹೋಗಿರಲಿಲ್ಲ ಎನ್ ಡಿ ಆರ್ ಎಫ್ ತಂಡದವರೆ ಬೋಟ್ ನಲ್ಲಿ ಕರೆದುಕೊಂಡು ಹೋಗಿದ್ದರು ಎನ್ನುತ್ತಿದ್ದಂತೆ ಮತ್ತೆ ಸಮರ್ಥಿಸಿಕೊಂಡ ಶಾಸಕರು ಹಾಗಾದರೆ ನಿಮಗೆ ದಾರಿತಪ್ಪಿಸಿ ಕರೆದುಕೊಂಡು ಹೋಗಿರಬೇಕು. ನೀವು ಭೇಟಿಕೊಟ್ಟ ಸ್ಥಳಕ್ಕೆ ಬೇರೆ ಮಾರ್ಗಗಳೂ ಇದ್ದವು, ಬೇರೆ ರಸ್ತೆಯಿಂದಲೂ ಹೋಗಬಹುದಿತ್ತು. ಬೇಕೆಂದೇ ವಿಪಕ್ಷ ನಾಯಕರು ಬೋಟ್ ಗಳಲ್ಲಿ ಹೋಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ; ಹೌರಾ ಉದ್ವಿಗ್ನ
https://pragati.taskdun.com/politics/bjp-protestwest-bengallathi-charge/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ