LatestUncategorized

*ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ; PWD ಸಹಾಯಕ ಇಂಜಿನಿಯರ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿಯೇ ಬರೋಬ್ಬರಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆಯಾಗಿದೆ. ಹಣದ ಬ್ಯಾಗ್ ಸಮೇತ ಸಹಾಯಕ ಇಂಜಿನಿಯರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜಗದೀಶ್ ಅವರ ಬ್ಯಾಗ್ ನಲ್ಲಿ 10.5 ಲಕ್ಷ ನಗದು ಹಣ ಪತ್ತೆಯಾಗಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಜಗದೀಶ್ ವಿಧಾನಸೌಧಕ್ಕೆ ಬ್ಯಾಗ್ ಸಮೇತ ಬಂದಿದ್ದು, ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪರಿಶೀಲನೆ ನಡೆಸಿದಾಗ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ.

ಇಷ್ಟೊಂದು ಪ್ರಮಾಣದ ಹಣವನ್ನು ವಿಧಾನಸೌಧಕ್ಕೆ ಯಾಕೆ ತರುತ್ತಿದ್ದೀರಾ? ದಾಖಲೆ ನೀಡುವಂತೆ ಕೇಳಿದಾಗ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ತಕ್ಷಣ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ.

ಇತ್ತಿಚಿನ ಮಾಹಿತಿ ಪ್ರಕಾರ ಹಣ ಪತ್ತೆ ಪ್ರಕರಣ ಸಂಬಂಧ ಮಂಡ್ಯ ಮೂಲದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Home add -Advt

*ಕೊರೊನಾ ಹೊಸ ತಳಿ ಪತ್ತೆ ವಿಚಾರ; ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್*

https://pragati.taskdun.com/dr-sudhakarclarificationomicrancovide-case/

Related Articles

Back to top button