Latest

ವಿಧಾನಸೌಧ ಎರಡನೇ ಮಹಡಿಯಲ್ಲಿ ಬೀಯರ್ ಬಾಟಲ್ ಗಳು ಪತ್ತೆ…!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಕ್ತಿಸೌಧ ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ಮಾಡಲಾಗಿದೆಯೇ ಎಂಬ ಅನುಮಾನವೊಂದು ಮೂಡಿದೆ. ವಿಧಾನಸೌಧದ ಎರಡನೇ ಮಹಡಿಯಲ್ಲಿ ಬೀಯರ್ ಬಾಟಲ್ ಗಳು ಪತ್ತೆಯಾಗಿದ್ದು ಈ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.

ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧ ಕುಡುಕರಿಗೆ ಬಳಕೆಯಾಗುತ್ತಿದೆಯೇ? ವಿಧಾನಸೌಧದಲ್ಲಿ ಮಧ್ಯಪಾನ ಮಾಡಿದ್ದಾದರೂ ಯಾರು ಎಂಬ ಹಲವು ಪ್ರಶ್ನೆ ಮೂಡಿದೆ.

ವಿಧಾನಸೌಧದ ಎರಡನೇ ಮಹಡಿಯ 208ನೇ ಕೊಠಡಿಯ ಹೊರಭಾಗದಲ್ಲಿ ಎರಡು ಬೀಯರ್ ಬಾಟಲ್ ಗಳು ಪತ್ತೆಯಾಗಿದ್ದು, ಈ ಫೋಟೋಗಳು ವೈರಲ್ ಆಗಿವೆ. ಈಗಾಗಲೇ ಸ್ವಚ್ಛತಾ ಸಿಬ್ಬಂದಿಗಳು ಬೀಯರ್ ಬಾಟಲ್ ಗಳನ್ನು ತೆಗೆದು ಶುಚಿಗೊಳಿಸಿದ್ದಾರೆ. ಆದರೆ ಶಕ್ತಿಸೌಧದಲ್ಲಿ ಮಧ್ಯಪಾನ ಮಾಡುವ ಮೂಲಕ ವಿಧಾನಸೌಧದ ಗೌರಕ್ಕೆ ಧಕ್ಕೆ ತರುವಂತಹ ಕೃತ್ಯ ನಡೆಸಿದ್ದಾದರೂ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ.

ಎತ್ತಿನಗಾಡಿಯಿಂದ ಆಯತಪ್ಪಿ ಬಿದ್ದ ಕಾಂಗ್ರೆಸ್ ಶಾಸಕರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button