
ಪ್ರಗತಿವಾಹಿನಿ ಸುದ್ದಿ: ಶನಿವಾರ ಸಂಜೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಕ್ತಿ 2K24 ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವದ ಅಂಗವಾಗಿ ವಿ ಟಿ ಯುನಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಅವರ ಗಾನಕ್ಕೆ ಇಡೀ ಬೆಳಗಾವಿ ಮನಸೋತು ತಲೆದೂಗಿತು.
‘ರಾಜಕುಮಾರ…’ ಗೀತೆಯೊಂದಿಗೆ ಆರಂಭಸಿದ ವಿಜಯ ಪ್ರಕಾಶ್ ನಂತರದಲ್ಲಿ ಮನಸಲ್ಲಿ ಅಲೆಲೆ, ಸಿಂಗಾರ ಸಿರಿಯೇ, ಯಾರೇ ಬಂದರೂ, ಪುನೀತ ಬಾಲ್ಯದ ನಮ್ಮ ಶಿವ ಕೈಲಾಸ ಸೇರಿಕೊಂಡನೋ… ಮುಂತಾದ ಪ್ರಸಿದ್ದ ಗೀತೆಗಳನ್ನ ಹಾಡಿ ನೆರೆದಿದ್ದ ಜನರನ್ನ ರಂಜಿಸಿದರು.

ಈ ಸಂಗೀತ ಸಂಜೆಯಲ್ಲಿ ಕುಲಪತಿಗಳಾದ ಪ್ರೊ ವಿದ್ಯಾಶಂಕರ ಎಸ್, ಕುಲಸಚಿವ ಪ್ರೊ ಬಿ ಈ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಪ್ರೊ ಟಿ ಎನ್ ಶ್ರೀನಿವಾಸ, ವಿ ಟಿ ಯು ಕಾರ್ಯಕಾರಿ ಪರಿಷತ್ ಸದಸ್ಯ ಸನ್ನಿ ರಾಜ್, ಹಣಕಾಸು ಅಧಿಕಾರಿ ಶ್ರೀಮತಿ ಎಂ ಎ ಸಪ್ನಾ ಹಾಗೂ ನಗರದ ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 6000ಕ್ಕಿಂತ ಹೆಚ್ಚಿನ ಜನಸ್ತೋಮ ಸಂಗೀತ ಸಂಜೆಯ ಸವಿಯನ್ನು ಉಂಡರು.
ಈ ಸಮಯದಲ್ಲಿ ವಿ ಟಿ ಯು ವತಯಿಂದ ಶ್ರೀ ವಿಜಯ ಪ್ರಕಾಶ್ ಅವರಿಗೆ ಸನ್ಮಾನಿಸಲಾಯಿತು.

ಹಿರಿಯ ಪೊಲೀಸ್ ಅಧಿಕಾರಿ ಡಿ ಸಿ ಪಿ ಸ್ನೇಹಾ ಅವರ ನೇತೃತ್ವದಲ್ಲಿ ವಿಜಯ ಪ್ರಕಾಶ ಅವರು ಹೆಲ್ಮೆಟ್ ಹಾಕಿಕೊಳ್ಳುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿದರು.
ಇದಕ್ಕೂ ಮೊದಲು ನಡೆದ ಯುಕ್ತಿ 2K24 ದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಬಹುಮಾನ ವಿತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ