Film & EntertainmentKannada NewsKarnataka NewsLatest

*ಸ್ಪಂದನಾ ಮೃತದೇಹ ಇಂದು ಬೆಂಗಳೂರಿಗೆ; ಹರಿಶ್ಚಂದ್ರಘಾಟ್ ನಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಂದು ರಾತ್ರಿ ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.

ಇಂದು ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಪಂದನಾ ಮೃತದೇಹ ಆಗಮಿಸಲಿದೆ. ಅಲ್ಲಿಂದ ಮಲ್ಲೇಶ್ವರಂ ನಿವಾಸಕ್ಕೆ ಅವರ ಪಾರ್ಥಿವಶರೀರ ಕೊಂಡೊಯ್ಯಲಾಗುತ್ತಿದೆ. ಮನೆಯ ಬಳಿಯೇ ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಡಲಾಗಿದೆ.

ನಾಳೆ ಸಂಜೆ ಬೆಂಗಳೂರಿನಲ್ಲಿಯೇ ಸ್ಪಂದನಾ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ಹರಿಶ್ಚಂದ್ರಾ ಘಾಟ್ ನಲ್ಲಿ ಈಡಿಗ ಸಂಪ್ರದಾಯದ ಪ್ರಕಾರ ಸ್ಪಂದನಾ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Home add -Advt

Related Articles

Back to top button