Film & EntertainmentKannada NewsKarnataka NewsLatest

*ಮಲಗಿದ್ದಲ್ಲೇ ಚಿರನಿದ್ರೆಗೆ ಜಾರಿದ ಸ್ಪಂದನಾ… ರಾತ್ರಿ ನಿದ್ರಿಸಿದವರು ಬೆಳಿಗ್ಗೆ ಏಳಲೇ ಇಲ್ಲ…ಅತ್ತಿಗೆ ಅಗಲಿಕೆಗೆ ಕಣ್ಣೀರಿಟ ನಟ ಶ್ರೀಮುರುಳಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದು, ಅತ್ತಿಗೆಯ ಅಗಲಿಕೆ ಬಗ್ಗೆ ವಿಜಯ್ ರಾಘವೇಂದ್ರ ಸಹೋದರ ಶ್ರೀಮುರುಳಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶ್ರೀಮುರುಳಿ ಮೂರ್ನಾಲ್ಕು ದಿನಗಳ ಹಿಂದೆ ಅತ್ತಿಗೆ ಸ್ನೇಹಿತರೊಂದಿಗೆ ಬಾಂಕಾಕ್ ಗೆ ಹೋಗಿದ್ದರು. ಬಳಿಕ ವಿಜಯ್ ರಾಘವೇಂದ್ರ ಕೂಡ ಜಾಯಿನ್ ಆಗಿದ್ದಾರೆ. ಬೆಳಿಗ್ಗೆ ಎಲ್ಲರೊಂದಿಗೂ ಸಹಜವಾಗಿ ಓಡಾಡುತ್ತಾ, ಚನ್ನಾಗೆಯೇ ಇದ್ದರು. ಎಂದಿನಂತೆ ರಾತ್ರಿ ಮಲಗಿದ ಅತ್ತಿಗೆ ಬೆಳಿಗ್ಗೆ ಎದ್ದೇಳಲೇ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ವಿಜಯ್ ರಾಘವೇಂದ್ರ ಫೋನ್ ಮಾಡಿ ಈ ವಿಷಯ ತಿಳಿಸಿದಾಗ ನನಗೆ ನಂಬಲೂ ಆಗುತ್ತಿಲ್ಲ. ಆಘಾತ ತಡೆಯಲು ಸಾಧ್ಯವಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button