
ಪ್ರಗತಿವಾಹಿನಿ ಸುದ್ದಿ: ವಿಜಯಪುರದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ಒಂದೇ ದಿನದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಜಿಲ್ಲೆಯ ಸಿಂದಗಿ ಪಟ್ಟಣದ ಸುತ್ತಮುತ್ತ ಭೂಮಿ ಕಂಪಿಸಿದೆ. ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೆ ನಾಲ್ಕು ಬಾರಿ ಭೂಕಂಪವಾಗಿದೆ. ಜೋರಾದ ಶಬ್ಧಗಳೊಂದಿಗೆ ಭೂಮಿ ಕಂಪಿಸಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಕಳೆದ 7 ದಿನಗಳ ಹಿಂದೆ ಭೂಮಿಯಿಂದ ಭಾರಿ ಪ್ರಮಾಣದ ಶಬ್ಧ ಕೇಳಿಬಂದಿತ್ತು. ಇದೀಗ ಏಕಾಏಕಿ ನಾಲ್ಕು ಬಾರಿ ಭೂಕಂಪವಾಗಿದ್ದು, ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.