Kannada NewsKarnataka NewsLatest

*ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರ ಕೊಲೆ: ಬೆಚ್ಚಿಬಿದ್ದ ಜನ*

ಪ್ರಗತಿವಾಹಿನಿ ಸುದ್ದಿ : ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. 

ಈ ಜೋಡಿ ಕೊಲೆಗೆ ವಿಜಯಪುರ ಜನ ಬೆಚ್ಚಿಬಿದ್ದಿದ್ದಾರೆ. ಕೊಲೆಯಾದವರನ್ನು ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖುರೇಷಿ (24) ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಹಂತಕರು ಎಸ್ಕೆಪ್ ಆಗಿದ್ದಾರೆ.

ಹಳೆಯ ವೈಷಮ್ಯದಿಂದ ಇಬ್ಬರನ್ನು ಕೊಲೆಗೈದಿರೋ ಶಂಕೆ ವ್ಯಕ್ತವಾಗಿದೆ. ಎರಡು ವರ್ಷಗಳ ಹಿಂದೆ ಈರನಗೌಡ ಎಂಬಾತನ ಮೇಲೆ ಇಸಾಕ್ ಖರೇಷಿ ಹಾಗೂ ಸಾಗರ ತೀವ್ರ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಈರಣಗೌಡ ಮೃತಪಟ್ಟಿದ್ದನಂತೆ. ಈ ದ್ವೇಷದ ಕಾರಣ ಇಬ್ಬರ ಕೊಲೆ ನಡೆದಿರೋ ಸಂಶಯ ವ್ಯಕ್ತವಾಗಿದೆ.

ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇಬ್ಬರು ಯುವಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕರ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ವಿಜಯಪುರ ಗ್ರಾಮೀಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button