
ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಪ್ರೀತಿಸಿ ವಿವಾಹವಾಗಿದ್ದ ಆರೋಗ್ಯಾಧಿಕಾರಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ.
ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಡಿಂಪಲ್ ಕೊಲೆಯಾದ ಮಹಿಳೆ. ಶ್ರೀಕಾಂತ್ ಪತ್ನಿಯನ್ನೇ ಕೊಂದ ಆರೊಗ್ಯಾಧಿಕಾರಿ.
ಶ್ರೀಕಾಂತ್ ಹಾಗೂ ಡಿಂಪಲ್ ಇಬ್ಬರೂ ಆರೋಗ್ಯಾಧಿಕಾರಿಗಳಾಗಿದ್ದರು. ಡಿಂಪಲ್ ಉಲವತ್ತು ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರೆ ಶ್ರೀಕಾಂತ್ ನೆಲ್ಲಕುದರಿ ಗ್ರಾಮದ ಆರೋಗ್ಯಾಧಿಕಾರಿಯಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.
ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳ, ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಅದೇ ರೀತಿ ಇಂದು ಕೂಡ ಗಂಡ-ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಕೋಪದಲ್ಲಿ ಪತಿ ಶ್ರೀಕಾಂತ್ ಪತ್ನಿ ಡಿಂಪಲ್ ಳ ಕತ್ತು ಹಿಸುಕಿ ಉಸಿರು ನಿಲ್ಲಿಸಿದ್ದಾನೆ.
ಇಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ