Kannada NewsKarnataka NewsLatest

*ಪತ್ನಿ, ಅತ್ತೆ ಕೊಲೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಪತಿ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ ಪತಿ ಮಹಾಶಯ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನವಭಾಗ್ ಪ್ರದೇಶದಲ್ಲಿ ನಡೆದಿದೆ.

ಪತ್ನಿ ರೂಪಾ (32) ಅತ್ತೆ ಕಲ್ಲವ್ವ (55) ಮೃತರು. ಮಲ್ಲಿಕಾರ್ಜುನ ಪತ್ನಿ ಹಾಗೂ ಅತ್ತೆಯನ್ನು ಕೊಲೆಗೈದ ಆರೋಪಿ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹೆಂಡತಿ ಹಾಗೂ ಅತ್ತೆಯನ್ನೇ ಕೊಲೆ ಮಾಡಿದ್ದಾನಂತೆ ವ್ಯಕ್ತಿ.

Home add -Advt

ಇಬ್ಬರನ್ನೂ ಹತ್ಯೆಗೈದ ಬಳಿಕ ಗಾಂಧಿಚೌಕ ಬಳಿಯ ಪೊಲೀಸ್ ಠಾಣೆಗೆ ಬಂದು ಮಂಜುನಾಥ್ ಶರಣಾಗಿದ್ದಾನೆ.

ಪತ್ನಿ ರೂಪಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಅಲ್ಲದೇ ಮನೆಯಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ. ಮಹಿಳಾ ಸಂಘಟನೆ ಅದು ಇದು ಎಂದು ಸದಾಕಾಲ ಮನೆಯಿಂದ ಆಚೆಯೇ ಇರುತ್ತಿದ್ದಳಂತೆ. ಇದರಿಂದ ಬೇಸತ್ತ ಪತಿ ಮಂಜುನಾಥ್ ಪತ್ನಿ ಹಾಗೂ ಅತ್ತೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

Related Articles

Back to top button