Latest

ಖಾಸಗಿ ವಾಹಿನಿ ಕ್ಯಾಮರಾಮೆನ್ ಪತ್ನಿಯೊಂದಿಗೆ ಆತ್ಮಹತ್ಯೆ; ಕಾರಣವೇನು?

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಇತ್ತೀಚೆಗಷ್ಟೇ ವಿವಾಹವಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ನಗರದ ಎಪಿಎಂಸಿ ಬಳಿಯ ಮನೆಯಲ್ಲಿ ನಡೆದಿದೆ.

ತಿಪ್ಪಣ್ಣ ಹೊಸಮನಿ (34) ಹಾಗೂ ಸುಜಾತಾ(30) ಮೃತ ದಂಪತಿ. ಕೊಣ್ಣೂರು ಗ್ರಾಮದ ತಿಪ್ಪಣ್ಣ ಹೊಸಮನಿ ಖಾಸಗಿ ವಾಹಿನಿಯಲ್ಲಿ ಕ್ಯಾಮರಾಮೆನ್ ಆಗಿ ಕೆಲಸ ಮಾಡುತ್ತಿದ್ದರು. ಕೆಸಾಪುರ ಗ್ರಾಮದ ಸುಜಾತಾಳನ್ನು ಪ್ರೀತಿಸಿ ಕೆಲದಿನಗಳ ಹಿಂದಷ್ಟೇ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಮುದ್ದೆಬಿಹಾಳದ ಎಪಿಎಂಸಿ ಬಳಿ ಮನೆಯಲ್ಲಿ ನವದಂಪತಿ ವಾಸವಾಗಿದ್ದರು. ಆದರೆ ಈಗ ಏಕಾಏಕಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದೇ ಮನೆಯಲ್ಲಿ ಅಕ್ಕಪಕ್ಕದ ಕೋಣೆಗಳಲ್ಲಿ ಪೈ-ಪತ್ನಿ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ.

ಮುದ್ದೆಬಿಹಾಳ ಠಾಣೆಯಲ್ಲಿ ಪಿಒಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ವಾಹಿನಿ ಕ್ಯಾಮರಾಮೆನ್ ಆಗಿದ್ದ ತಿಪ್ಪಣ್ಣ ಇತ್ತೀಚೆಗೆ ಕೆಲಸ ಬಿಟ್ಟಿದ್ದರು ಎಂದೂ ಹೇಳಲಾಗುತ್ತಿದೆ. ನವದಂಪತಿಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Home add -Advt

ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ರೈಲ್ವೆ ಪಾದಚಾರಿ ಮೇಲ್ಸೇತುವೆ; ಮಹಿಳೆ ದುರ್ಮರಣ

https://pragati.taskdun.com/maharashtra-railway-stationbridge-collapsewoman-death/

Related Articles

Back to top button