ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತವನ್ನು ಆಹ್ವಾನಿಸದೆ ಚೀನಾ ನಡೆಸಿದ್ದ ಇಂಡಿಯನ್ ಓಷಿಯನ್ ರೀಜನ್ ಫೋರಂ ಸಭೆಯಲ್ಲಿ ತಾವು ಭಾಗವಹಿಸಿಲ್ಲ ಎಂದು ಆಸ್ಟ್ರೇಲಿಯಾ ಹಾಗೂ ಮಾಲ್ಡೀವ್ಸ್ ಅಧಿಕೃತವಾಗಿ ಸ್ಪಷ್ಟಪಡಿಸುವ ಮೂಲಕ ಚೀನಾಕ್ಕೆ ತಪರಾಕಿ ನೀಡಿವೆ.
ಕಳೆದ ನವೆಂಬರ್ 21ರಂದು ನಡೆದ ಸಭೆಯಲ್ಲಿ ಆಸ್ಟ್ರೇಲಿಯಾ ಹಾಗೂ ಮಾಲ್ಡೀವ್ಸ್ ಸೇರಿದಂತೆ 19 ದೇಶಗಳು ಭಾಗವಹಿಸಿದ್ದಾಗಿ ಚೀನಾ ಹೇಳಿಕೊಂಡಿತ್ತು.
ಆದರೆ ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈ ಕಮಿಷನರ್, ಬ್ಯಾರಿ ಓ’ಫಾರೆಲ್ ಅವರು “ಆಸ್ಟ್ರೇಲಿಯಾದ ಯಾವುದೇ ಸರ್ಕಾರಿ ಅಧಿಕಾರಿಯೂ ವೇದಿಕೆಯ ಸಭೆಗೆ ಹಾಜರಾಗಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ತನ್ನ ದೇಶದ ಯಾವುದೇ ಪ್ರತಿನಿಧಿ ಈ ಸಭೆಯಲ್ಲಿ ಭಾಗವಹಿಸಿರುವುದನ್ನು ನಿರಾಕರಿಸಿದೆ. ಮಾಲ್ಡೀವ್ಸ್ ಸರ್ಕಾರದಿಂದ ಅಧಿಕೃತವಾದ ಯಾವುದೇ ಪ್ರತಿನಿಧಿ ಸಭೆಯಲ್ಲಿರಲಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ರೈಲ್ವೆ ಪಾದಚಾರಿ ಮೇಲ್ಸೇತುವೆ; ಮಹಿಳೆ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ