Kannada NewsLatestNational

*ಗ್ರಾಹಕರಿಗೆ ಮತ್ತೆ ಶಾಕ್: ಸಿಎನ್‌ಜಿ ಬೆಲೆಯಲ್ಲಿ 2 ರೂ. ಏರಿಕೆ*

ಪ್ರಗತಿವಾಹಿನಿ ಸುದ್ದಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟಿದೆ. ದೆಹಲಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಸಂಕುಚಿತ ನೈಸರ್ಗಿಕ ಅನಿಲ(CNG) ಬೆಲೆಯನ್ನು 2 ರೂ. ಗಳಷ್ಟು ಹೆಚ್ಚಿಸಲಾಗಿದೆ.

ಈ ನೂತನ ದರ ಏರಿಕೆಯ ಬೆನ್ನಲ್ಲೇ ದೆಹಲಿಯಲ್ಲಿ ಈಗ ಪ್ರತಿ ಕೆಜಿ ಸಿಎನ್‌ಜಿ ಬೆಲೆ 83.09 ರೂಪಾಯಿಗಳಿಗೆ ತಲುಪಿದೆ.

ದೆಹಲಿ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ರಾಷ್ಟ್ರೀಯ ರಾಜಧಾನಿ ವಲಯದ (ಎನ್‌ಸಿಆ‌ರ್) ನಗರಗಳಾದ ನೋಯ್ಯಾ ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿಯೂ ಸಿಎನ್‌ಜಿ ದರಗಳಲ್ಲಿ ವ್ಯತ್ಯಾಸವಾಗಿದ್ದು, ಅಲ್ಲಿನ ಗ್ರಾಹಕರು ಕೂಡ ಹೆಚ್ಚಿನ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಜಾಗತಿಕ ಮಟ್ಟದಲ್ಲಿ ಇಂಧನ ದರಗಳಲ್ಲಿ ಆಗುತ್ತಿರುವ ಏರಿಳಿತ ಹಾಗೂ ಪೂರೈಕೆ ವೆಚ್ಚ ಹೆಚ್ಚಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. 

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಭಾರದಿಂದ ಬೇಸತ್ತು ಪರ್ಯಾಯ ಇಂಧನದ ಮೊರೆ ಹೋಗಿದ್ದ ಜನಸಾಮಾನ್ಯರಿಗೆ ಮತ್ತು ಪ್ರಮುಖವಾಗಿ ಆಟೋ, ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನ ಚಾಲಕರಿಗೆ ಈ ದಿಢೀರ್ ದರ ಏರಿಕೆ ದೊಡ್ಡ ಆಘಾತ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button