Belagavi NewsBelgaum NewsKannada NewsKarnataka NewsPolitics

*ಬಿತ್ತನೆಗೆ ಅಗತ್ಯ ವಸ್ತುಗಳ ಕೊರೆತೆ ಆಗದಂತೆ ಕ್ರಮ ಕೈಗೊಳ್ಳಿ: ರೈತರ ಮುಖಂಡರ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಡೀಸೆಲ್ ಕೊರತೆ ನೀಗಿಸಬೇಕು ಭಾರತೀಯ ಕೃಷಿಕ ಸಮಾಜ ಸಂಘದಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೋಹಮ್ಮದ ರೋಷನ್ ಅವರಿಗೆ ಮನವಿ ಸಲ್ಲಿಸಲಾಯಿತು.‌

ಬೆಳಗಾವಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.  ರಾಜ್ಯದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಜ್ಜಾಗಿರುವ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿನಾಕಾರಣ ರೈತರಲ್ಲಿ ಗೊಂದಲ ಸೃಷ್ಟಿಸದೆ, ಕೃಷಿ ಚಟುವಟಿಕೆ ಕೈಗೊಳ್ಳಲು ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು‌. ರೈತರ ಹಿತ ಕಾಯುವ ಕಾರ್ಯವಾಗಬೇಕು. ಡೀಸೆಲ್, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇತರೆ ಅಗತ್ಯ ವಸ್ತುಗಳು ಕೊರತೆ ಆಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

Home add -Advt

ಪ್ರಸಕ್ತ ಸಾಲಿನ ಹಂಗಾಮಿಗೆ ರೈತರ ಕೃಷಿ ಚಟುವಟಿಕೆಗಳಿಗೆ  ಅವಶ್ಯವಿರುವ ಡೀಸೆಲ್ ನ್ನು ಸಮರ್ಪಕ ಮತ್ತು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಬೇಕು. ರಾಜ್ಯದ ರೈತರಿಗೆ ಸಮರ್ಪಕ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಬೇಕು. ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಯಿಂದ ನಷ್ಟವಾದ ತೋಟಗಾರಿಕಾ ಬೆಳೆಗಳ ಸಮೀಕ್ಷೆ ನಡೆಸಿ,ಹೆಚ್ಚಿನ ಮೊತ್ತದ ಪರಿಹಾರ ಕೊಡಬೇಕು. ಬಿತ್ತನೆ ಬೀಜ, ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ವಾಗದಂತೆ ತಡೆಯಬೇಕು. ವನ್ಯ ಪ್ರಾಣಿಗಳ ಸಂಘರ್ಷ ದಿಂದ ಮೃತಪಟ್ಟರೆ ಅಥವಾ ಗಾಯಾಳುಗಳಿಗೆ ಚಿಕಿತ್ಸಾ ಹಾಗೂ ಪರಿಹಾರ ವೆಚ್ಚ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

Related Articles

Back to top button