*ಮನೆಗಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದ ಮಹಾಲಕ್ಷ್ಮೀಪುರಂ ನಗರದಲ್ಲಿರುವ ಮನೆಯ ಬಾಗಿಲು ಮುರಿದು 42 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾರಿಹಾಳ ಪೊಲೀಸ ಠಾಣೆ ಅಪರಾಧ ಸಂಖ್ಯೆ: 59/2026 ಕಲಂ: 305, 331(3) ಬಿಎನ್‌ಎಸ್-2023 ನೇ ಪ್ರಕರಣದಲ್ಲಿ ದಾಖಲಾಗಿ ತನಿಖೆ ನಡೆಸಲಾಗಿತ್ತು.
ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಳುವಾದ ವಸ್ತುಗಳು ಹಾಗೂ ಆರೋಪಿತರ ಪತ್ತೆ ಕುರಿತು ಈ ಪ್ರಕರಣದ ಪತ್ತೆಗಾಗಿ ಒಂದು ತಂಡವನ್ನು ರಚಿಸಿ ತನಿಖೆಯನ್ನು ಆರಂಭಿಸಿ ಆರೋಪಿ ವಿಶ್ವನಾಥ ದುರ್ಗಪ್ಪ ಮುತ್ತೂರ (26) ಎಂಬಾತನನ್ನು ಬಂಧಿಸಲಾಗಿದೆ.
ಈ ಆರೋಪಿ ವಿರುದ್ಧ ಮಾರಿಹಾಳ ಪೊಲೀಸ ಠಾಣೆಯ 3 ಪ್ರಕರಣಗಳು ಹಾಗೂ 1 ಕಾಕತಿ ಪೊಲೀಸ ಠಾಣೆ ಮನೆ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು ತನಿಖೆಯಲ್ಲಿ ಬಯಲಾಗಿದೆ.
ಆರೋಪಿಯಿಂದ ಸುಮಾರು 23,00,000 ರೂ ಬೆಲೆಯ 134 ಗ್ರಾಂ ಬಂಗಾರದ ಆಭರಣಗಳು ಮತ್ತು 510 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



