Latest

4 ತಿಂಗಳ ಮಗುವಿನೊಂದಿಗೆ ಬಂದು ಪರೀಕ್ಷೆ ಬರೆದ ಮಹಿಳೆ; ವೈರಲ್ ಆದ ಫೋಟೋ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಅದೆಷ್ಟೋ ಹೆಣ್ಣುಮಕ್ಕಳು ಗ್ರಾಮೀಣ ಪ್ರದೇಶಗಳಲ್ಲಿ ಓದುವ, ಸ್ವಾವಲಂಬಿ ಜೀವನದ ಕನಸು ಕಾಣುತ್ತಿರುವಾಗಲೇ ಮನೆಯವರ ಒತ್ತಾಯದ ಮೇರೆಗೆ ವೈವಾಹಿಕ ಜೀವನಕ್ಕೆ ಕಾಲಿಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಬಳಿಕ ಗಂಡ-ಮಕ್ಕಳು, ಅತ್ತೆ-ಮಾವ ಹೀಗೆ ಕಾಲ ಕಳೆದುಹೋಗುತ್ತಿರುತ್ತದೆ. ಇಂತಹ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ ಇಲ್ಲೊಬ್ಬ ಮಹಿಳೆ.

ಓದಿನ ತುಡಿತ, ಏನಾದರೂ ಸಾಧಿಸಬೇಕು ಎಂಬ ಛಲದೊಂದಿಗೆ ತಸ್ಲೀಮಾ ಮಕಾಂದಾರ್ ಎಂಬ ಮಹಿಳೆ ಹಸುಗೂಸನ್ನು ಎತ್ತಿಕೊಂಡg ಬಂದು ಎಸ್.ಎಸ್.ಎಲ್ ಸಿ ಪರೀಕ್ಷೆ ಬರೆದಿದ್ದಾರೆ.

Related Articles

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಹೊರಬರುತ್ತಿದ್ದಂತೆ ಎಲ್ಲರ ಗಮನ ತಸ್ಲೀಮಾ ಅವರ ಪುಟ್ಟ ಮಗು, ಅಲ್ಲಿಯೇ ಇದ್ದ ಆಶಾ ಕಾರ್ಯಕರ್ತೆಯತ್ತ ನೆಟ್ಟಿದೆ. ತಸ್ಲೀಮಾ ಆಗಷ್ಟೇ ಪರೀಕ್ಷೆ ಮುಗಿಸಿ ಹೊರಬಂದಿದ್ದಾರೆ. ಪರೀಕ್ಷಾ ಕೇಂದ್ರದ ಒಳಗೆ ತಸ್ಲೀಮಾ ಪರೀಕ್ಷೆ ಬರೆಯುವಾಗ ಅವರ ನಾಲ್ಕು ತಿಂಗಳ ಮಗುವನ್ನು ಆಶಾಕಾರ್ಯಕರ್ತೆಯೊಬ್ಬರು ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತು ನೋಡಿಕೊಳ್ಳುತ್ತಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಸ್ಲೀಮಾ ಇಂದು ನಾಲ್ಕು ತಿಂಗಳ ಮಗುವಿನೊಂದಿಗೆ ಬಂದು ಪರೀಕ್ಷೆ ಬರೆದಿದ್ದಾರೆ. ಪುಟ್ಟ ಕಂದನನ್ನು ಮನೆಯಲ್ಲಿ ಬಿಟ್ಟು ಬರಲಾಗದೇ ಧೈರ್ಯ ಮಾಡಿ ಮಗುವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ತಸ್ಲೀಮಾ ಅವರಿಗೆ ನೆರವಾಗಿದ್ದು ಉಮಾ ಎಂಬ ಆಶಾ ಕಾರ್ಯಕರ್ತೆ. ಮಗುವನ್ನು ಎತ್ತಿಕೊಂಡ ಉಮಾ ತಸ್ಲೀಮಾ ಅವರಿಗೆ ಪರೀಕ್ಷೆ ಬರೆದು ಬರುವವರೆಗೆ ಮಗು ನೋಡಿಕೊಳ್ಳುವುದಾಗಿ ಹೇಳಿ, ತಸ್ಲೀಮಾ ಬರುವವರೆಗೂ ಅವರ ಮಗುವನ್ನು ನೋಡಿಕೊಂಡಿದ್ದಾರೆ. ಹಿಜಾಬ್, ಕೇಸರಿ ಶಾಲು ವಿವಾದ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಗೊಂದಲದಂತ ಸಂದರ್ಭದಲ್ಲಿ ನಿಷ್ಕಲ್ಮಷವಾದ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ.

SSLC ಪರೀಕ್ಷೆ ಬರೆಯುತ್ತಲೇ ಸಾವನ್ನಪ್ಪಿದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button