ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಲೇಜ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಮುನಿವೀರಪ್ಪ ಗಲ್ಲಿಯಲ್ಲಿ ನಡೆದಿದೆ.
22 ವರ್ಷದ ಆಲಿಯಾ ಅಂಜುಮ್ ಅಣ್ಣಿಗೇರಿ ಮೃತ ಯುವತಿ. ಸರ್ಜಾಪುರ ನಾಡ ಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಆನೇಕಲ್ ಪಟ್ಟಣದಲ್ಲಿ ತನ್ನ ಅಣ್ಣನೊಂದಿಗೆ ವಾಸವಾಗಿದ್ದಳು. ಅಣ್ಣ ಕೆಲಸದ ಮೇಲೆ ಬಳ್ಳಾರಿಗೆ ತೆರಳಿದ್ದ ವೇಳೆ ಆಲಿಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ