ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಮತ ಯಂತ್ರಗಳನ್ನು ಹೊತ್ತೊಯ್ಯಲಾಗುತ್ತಿದೆ ಎಂಬ ಶಂಕೆಯಿಂದ ಗ್ರಾಮಸ್ಥರು ಮತಯಂತ್ರಗಳನ್ನೇ ಪುಡಿಗೈದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಸವನಬಾಗೇವಾಡಿ ತಾಲೂಕಿನ ಮಸಬನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮತಯಂತ್ರಗಳನ್ನು ಹೊತ್ತೊಯ್ಯಲಾಗುತ್ತಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಮತಗಟ್ಟೆಯತ್ತ ನುಗ್ಗಿದ ಗ್ರಾಮಸ್ಥರ ಗುಂಪು ಕಾಯ್ದಿರಿಸಿದ್ದ ಮತಯಂತ್ರಗಳು, ವಿವಿ ಪ್ಯಾಟ್ ಗಳನ್ನು ನೆಲಕ್ಕೆ ಬಡಿದು ಧ್ವಂಸಗೈದಿದ್ದಾರೆ.
ಮತಯಂತ್ರ ಕೈಕೊಟ್ಟಲ್ಲಿ ಪರ್ಯಾಯವಾಗಿ ಬಳಕೆ ಮಾಡಲು ಕಾಯ್ದಿರಿಸಲಾಗಿದ್ದ ಇವಿಎಂ, ವಿವಿಪ್ಯಾಟ್ ಮಶೀನ್‌ಗಳನ್ನು ಮರಳಿ ತರಲಾಗುತ್ತಿತ್ತು. ಇದನ್ನು ಗಮನಿಸಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದ್ದರಿಂದ ತಪ್ಪು ಭಾವಿಸಿ ರೊಚ್ಚಿಗೆದ್ದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಚುನಾವಣಾಧಿಕಾರಿ ಕಾರನ್ನು ಸಹ ಪುಡಿಗೈದು ಮಗುಚಿ ಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ