ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿ.ಟಿ ರವಿ ಮಾತನಾಡಿದ್ದು ದೊಡ್ಡ ತಪ್ಪು, ಮಹಿಳೆಯರ ಮೇಲೆ ಮಾತನಾಡುವದನ್ನು ನಾವೆಲ್ಲರೂ ಖಂಡಿಸುತ್ತೇವೆ. ಅವರ ಬಾಯಿ ಮೇಲೆ ಹಿಡಿತ ಇಲ್ಲ. ಏನೇ ಮಾತನಾಡಿದರೂ ನಾವು ಹೀರೋ ಆಗುತ್ತೇವೆ ಅಂದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸಿ.ಟಿ ರವಿ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ಹೇಳಿಕೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಕೆಲ ಬಿಜೆಪಿಯವರು ಹುಚ್ಚರ ಕೈಯಲ್ಲಿ ಕಲ್ಲು ಕೊಟ್ಟಹಾಗೆ ಆಡುತ್ತಾರೆ. ಯಾರಿಗೆ ಒಗಿತಾರೊ ಗೊತ್ತಿಲ್ಲ. ಆ ಕಲ್ಲು ಯಾರ ಮೇಲೆ ಬೀಳುತ್ತೊ ಗೊತ್ತಿಲ್ಲ. ಪೊಲೀಸರು ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನ ಮಾಡಿದ್ದಾರೆ. ಬಿಜೆಪಿಗರು ತಮ್ಮ ಬಾಯಿಗೆ ಬರುವ ಮಾತುಗಳೇ ನಿಜಾ ಅನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಬೆಳಗಾವಿಯಲ್ಲಿ ಗಾಂಧೀ ಭಾರತ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನ ನಡೆಸಿದ್ದಕ್ಕೆ ನೂರು ವರ್ಷ ತುಂಬಿದೆ. ನೂರು ವರ್ಷದ ಸಂಭ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ