Kannada NewsLatest

ಜಾಮೀನು ಅರ್ಜಿ ಹಿಂಪಡೆದ ವಿನಯ್ ಕುಲ್ಕರ್ಣಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಜಾಮಿನು ಅರ್ಜಿಯನ್ನು ಹಿಂಪಡೆದಿದ್ದಾರೆ.

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿಸಲ್ಪಟ್ಟಿರುವ ವಿನಯ್ ಕುಲ್ಕರ್ಣಿ ಬೆಳಗಾವಿ ಹಿಡಲಗಾ ಜೈಲಿನಲ್ಲಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆ ಕೋರಿ ಧಾರವಾಡ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರೆ ಜಾಮೀನು ಅರ್ಜಿ ವಜಾಗೊಳಿಸಿದ್ದ ನ್ಯಾಯಾಲಯ ಸಿಬಿಐಗೆ ತಕರಾರು ಅರ್ಜಿ ಸಲ್ಲಿಸುವಂತೆ ಸೂಚಿಸಿ ನೋಟೀಸ್ ನೀಡಿತ್ತು.

ಇದೀಗ ವಿನಯ್ ಕುಟುಂಬದವರ ಕೋರಿಕೆ ಮೇರೆಗೆ ವಿನಯ್ ಪರ ವಕೀಲ ಪಠಾಣ್, ವಿನಯ್ ಜಾಮೀನು ಅರ್ಜಿ ವಾಪಸ್ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ, ತಕರಾರು ಅರ್ಜಿ ಸಲ್ಲಿಸದೇ ನ್ಯಾಯಾಲಯದಿಂದ ವಾಪಸ್ ಆಗಿದೆ.

Home add -Advt

Related Articles

Back to top button