Karnataka NewsLatest

ವಿನಯ ಕುಲಕರ್ಣಿ ಹಿಂಡಲಗಾ ಜೈಲಿಗೆ – ವಿಡೀಯೋ ಸಹಿತ ವರದಿ – Updated

 

ಪ್ರಗತಿವಾಹಿನಿ ಸುದ್ದಿ, ಧಾರವಾಡ – ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ರಾತ್ರಿ 8.40ರ ಸುಮಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಅವರನ್ನು ಹಿಂಡಲಗಾ ಜೈಲಿಗೆ ಕರೆತರಲಾಯಿತು.

Home add -Advt

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ ಕುಲಕರ್ಣಿಯನ್ನು ಇಂದು ಬೆಳಗ್ಗೆ ಸಿಬಿಐ ಬಂಧಿಸಿದೆ. ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಮೂರ್ತಿ ಎಂ.ಪಂಚಾಕ್ಷರಿ ಒಂದು ದಿನದ ಮಟ್ಟಿಗೆ ವಿನಯ ಕುಲಕರ್ಣಿಗೆ ಜೈಲಿಗೆ ಕಳುಹಿಸಿ ಆದೇಶಿಸಿದ್ದಾರೆ.

ಶುಕ್ರವಾರ ಜೈಲಿನಿಂದ ವಿಡೀಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದ್ದಾರೆ. ನಂತರ ಜಾಮೀನು ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ.

ಇಂದು ಬೆಳಗ್ಗೆಯಿಂದ ಸಂಜೆಯವರೆಗೂ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿನಯ ಕುಲಕರ್ಣಿ ಮತ್ತು ಸಹೋದರ ವಿಜಯ ಕುಲಕರ್ಣಿಯ ವಿಚಾರಣೆಯನ್ನು ಸಿಬಿಐ ನಡೆಸಿದೆ. ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರರು ಸಿಬಿಐ ವಶಕ್ಕೆ

2 ವರ್ಷದಲ್ಲಿ ಧಾರವಾಡದಲ್ಲಿ ನಡೆದಿದ್ದು 96 ಕೊಲೆ?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button