ಟೀಂ ಇಂಡಿಯಾಗೆ ಮೊದಲೇ ತಿಳಿಸಿದ್ರಾ ವಿರಾಟ್ ಕೋಹ್ಲಿ?

ಪ್ರಗತಿವಾಹಿನಿ ಸುದ್ದಿ, ಮುಂಬೈ-

ಭಾರತ ಟೆಸ್ಟ್ ಕ್ರಿಕೇಟ್ ತಂಡದ ನಾಯಕತ್ವವನ್ನು ತ್ಯಜಿಸುತ್ತಿರುವ ಬಗ್ಗೆ ವಿರಾಟ್ ಕೋಹ್ಲಿ ತಮ್ಮ ತಂಡದ ಸಹ ಆಟಗಾರರಿಗೆ ಶುಕ್ರವಾರವೆ ಮಾಹಿತಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.
ಶನಿವಾರ ಕೇಪ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲುತ್ತಿದ್ದಂತೆ ಟೆಸ್ಟ್ ಕ್ರಿಕೇಟ್ ನಾಯಕತ್ವಕ್ಕೆ ವಿರಾಟ್ ಕೋಹ್ಲಿ ವಿದಾಯ ಹೇಳಿದ್ದಾರೆ. ಆದರೆ ಪಂದ್ಯ ಸೋಲುವ ಒಂದು ದಿನ ಮೊದಲೇ ಅವರು ಟೀಂ ಮೇಟ್ ಗಳಿಗೆ ಈ ಕುರಿತು ಮಾಹಿತಿ ನೀಡಿದ್ದರು. ಆದರೆ ಈ ಸುದ್ದಿಯನ್ನು ಯಾರಲ್ಲೂ ಹೇಳದಂತೆ ಟೀಂ ಮೇಟ್ ಗಳಿಗೆ ಕೋರಿದ್ದರು ಎಂದು ವರದಿಯಾಗಿದೆ.

ಯಶಸ್ವಿ ನಾಯಕ
ಒಟ್ಟು 68 ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸಿದ್ದ ವಿರಾಟ್ ಕೋಹ್ಲಿ 40 ಪಂದ್ಯಗಳಲ್ಲಿ ವಿಜಯ ಸಾಧಿಸುವ ಮೂಲಕ ಇದುವರೆಗಿನ ಭಾರತೀಯ ಕ್ರಿಕೇಟ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಕೋಹ್ಲಿ ಅವರು ಟೆಸ್ಟ್ ಕ್ರಿಕೇಟ್ ವಿಧಾಯದ ಬಗ್ಗೆ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿದ್ದು , ಕೋಹ್ಲಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಕ್ರಿಕೇಟಿಗ ಸುರೇಶ್ ರೈನಾ ಕೋಹ್ಲಿ ಅವರ ನಿರ್ಧಾರದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರೆ ನಟ ರಣಬೀರ್ ಕಪೂರ್ ” ರಾಜ ಯಾವತ್ತಿಗೂ ರಾಜನೆ ” ( king is always king ) ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಸಹ ವಿರಾಟ್ ರ ಆಟ ಮತ್ತು ನಾಯಕತ್ವವನ್ನು ಪ್ರಶಂಸಿಸಿದ್ದಾರೆ. ಇನ್ನು ಹೊಡಿ ಬಡಿ ದಾಂಡಿಗ ವಿರೇಂದ್ರ ಸೆಹ್ವಾಗ್ ” ಕೋಹ್ಲಿ ಅವರ ಯಶಸ್ಸನ್ನು ಅವರ ಆಟದ ಅಂಕಿ ಸಂಖ್ಯೆಗಳೇ ಹೇಳುತ್ತವೆ ” ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೇಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರೀಡಾ ಪಟುಗಳು, ಸಿನಿ ತಾರೆಯರು ವಿರಾಟ್ ಕೋಹ್ಲಿಯ ಕ್ರಿಕೇಟ್ ಆಟವನ್ನು ಶ್ಲಾಘಿಸಿದ್ದಾರೆ.

ಇನ್ನು ವಿರಾಟ್ ಕೋಹ್ಲಿ ಟೆಸ್ಟ್ ಕ್ರಿಕೇಟ್ ನಾಯಕತ್ವ ತ್ಯಜಿಸಿದ ವಿಷಯ ಟ್ಚಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲ ತಾಣಗಳಲ್ಲಿ ಶನಿವಾರದ ಅತಿ ಹೆಚ್ಚು ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿದೆ.

 

ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button